Karada Vishwa

News · July 6, 2025

ಶ್ರೀವತ್ಸ ಅಚ್ಯುತ ಆನೆಮಜಲು ಇವರಿಗೆ ವಿದ್ಯಾವಾರಿಧಿ ಪದವಿ

ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ತಿರುಪತಿಯಿಂದ ಜ್ಯೋತಿಷ್ಯ ವಿಭಾಗದಲ್ಲಿ ಸಂಶೋಧನಾತ್ಮಕ ಪ್ರಬಂಧಕ್ಕೆ ವಿದ್ಯಾವಾರಿಧಿ (ಪಿಎಚ್.ಡಿ) ಪದವಿ ದೊರಕಿರುತ್ತದೆ.

ಆನೆಮಜಲಿನ ಶ್ರೀಯುತ ವಿ. ರಾಧಾಕೃಷ್ಣ ಭಟ್ಟ್ ಮತ್ತು ಸವಿತಾ ದಂಪತಿಗಳ ಪುತ್ರರಾದ ವಿ. ಶ್ರೀವತ್ಸ ಅಚ್ಯುತ ಇವರು ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ತಿರುಪತಿ ಇಲ್ಲಿನ ಜ್ಯೋತಿಷ್ಯ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಧರ್ಮದಾಸನ್ ಇವರ ಮಾರ್ಗದರ್ಶನಲ್ಲಿ "ದೇವಪ್ರಶ್ನ‌ಚಿಂತನೇ‌ ಬೃಹಜ್ಜಾತಕಸ್ಯ ಪ್ರಮುಖತಾ - ಏಕಂ ಸಮೀಕ್ಷಾತ್ಮಕಮಧ್ಯಯನಂ" (A critical study on Importance of Bruhajjatakam in Devaprashnam) ಎಂಬ ವಿಷಯದಲ್ಲಿ ಜ್ಯೋತಿಷ್ಯ ಫಲಿತವಿಭಾಗದಲ್ಲಿ ಮಂಡಿಸಿದ ಸಂಶೋಧನಾತ್ಮಕ ಪ್ರಬಂಧಕ್ಕೆ ವಿದ್ಯಾವಾರಿಧಿ (ಪಿಎಚ್.ಡಿ) ಪದವಿಯು ದೊರಕಿರುತ್ತದೆ.

ಅಭಿನಂದನೆಗಳು 

Education
ಶ್ರೀವತ್ಸ ಅಚ್ಯುತ ಆನೆಮಜಲು ಇವರಿಗೆ ವಿದ್ಯಾವಾರಿಧಿ ಪದವಿ