
Article · March 10, 2026
ಮುಕ್ತಕಗಳು
- ಸಂಧ್ಯಾ ಕೊರೆಕ್ಕಾನ

ಗೀಜಗವು ಗೂಡೊಂದ ಕಟ್ಟಿಹುದು ಏನಂದ
ಸೋಜಿಗವು ಕಾಣಲಿಕೆ ನಿಪುಣತೆಯ ಕಲೆಯು
ನಾಜೂಕ ಕಲಿಸಿಹುದು ಯಾರಯ್ಯ ಹಕ್ಕಿಗದು
ಓಜನವನೇಯದಿಕೆ ಬಾಳಸಂಧ್ಯೆ

ಅನ್ನವದು ಬೆಂದಿತೆಂಬುವುದನ್ನು ನೋಡಲಿಕೆ
ಅನ್ನದಗುಳೊಂದನ್ನ ನೋಡಿದರೆ ಸಾಕು
ಮನ್ನಣೆಯು ಸಿಗುವಂಥ ಮಾತೊಂದೆ ಸಾಕಂತೆ
ತನ್ನಿರವ ಸಾರಲಿಕೆ ಬಾಳಸಂಧ್ಯೆ
Creative Writings
