
Article · November 12, 2026
ದೀಪಾವಳಿ
By ಶ್ರೀದೇವಿ ಕಜಮಲೆ.
ಶ್ರೀದೇವಿ ಕಜಮಲೆ.
ಅಸುರ ನರಕನ ಉಪಟಳದಿಂದ
ನಿಶೆ ತುಂಬಿದ ಜಗವು
ಜಗದೊಡೆಯನಿಗೆ ಮೊರೆಯನು ಇಡಲು
ಇನ್ನೆಲ್ಲಿದೆ ಭಯವು
ಅಭಯವ ಕೊಟ್ಟನು ಮಾಧವ ಲೋಕಕೆ
ದುಷ್ಟರ ಸಂಹಾರ
ಮಾಡುವೆನೆಂದು ಲೋಕಕೆ ಸಾರಿದ
ಆ ಜಗದೋಧ್ಧಾರ
ಅಂತೆಯೆ ಅಸುರನ ಮರ್ಧನ ಮಾಡಿದ
ಕೃಷ್ಣ ಚತುರ್ದಶಿಯು
ಆ ಘಳಿಗೆಯಲಿ ಹಣತೆಯ ಉರಿಸಲು
ಸರಿಯಿತು ಕತ್ತಲೆಯು
ಬೆಳಕಾಯಿತು ಜಗವು
ಅದೆ ದೀಪಾವಳಿಯು
Creative Writings
