Karada Vishwa

News · November 18, 2026

ಡಾ. ಪ್ರದೀಪ್‌ ನಾವೂರು ಅವರಿಂದ 'ಜೀವನದಲ್ಲಿ ಭಗವದ್ಗೀತೆಯ ಪ್ರಸ್ತುತತೆ' ಕುರಿತು ಉಪನ್ಯಾಸ

ಸುದ್ದಿ ನ್ಯೂಸ್ ಬೆಳ್ತಂಗಡಿ

ಬೆಳ್ತಂಗಡಿ: ಕರಾಡ ಬ್ರಾಹ್ಮಣ ಸಭಾ ಮೈಸೂರು ಇದರ ವಾರ್ಷಿಕೋತ್ಸವ ಹಾಗೂ ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಇದರ ಸುವರ್ಣ ಸಂಭ್ರಮ ಕಾರ್ಯಕ್ರಮವು ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ನಾವೂರಿನ ವೈದ್ಯರಾದ ಡಾ. ಪ್ರದೀಪ್ ನಾವೂರು ಆಟಿಕುಕ್ಕೆ ಅವರು 'ಜೀವನದಲ್ಲಿ ಭಗವದ್ಗೀತೆಯ ಪ್ರಸ್ತುತತೆ' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.ಭಗವದ್ಗೀತೆಯ ಸಂದೇಶಗಳು ಕೇವಲ ಆಧ್ಯಾತ್ಮಿಕ ಜೀವನಕ್ಕೆ ಸೀಮಿತವಾಗಿರದೆ, ದೈನಂದಿನ ಬದುಕಿನಲ್ಲಿಯೂ ಮಹತ್ವದ ಪಾತ್ರ ವಹಿಸುತ್ತವೆ. ಮಕ್ಕಳು, ವಿದ್ಯಾರ್ಥಿಗಳು, ಯುವಜನತೆ ಹಾಗೂ ಹಿರಿಯ ನಾಗರಿಕರ ಜೀವನದಲ್ಲಿ ಭಗವದ್ಗೀತೆಯ ತತ್ವಗಳು ಯಾವ ರೀತಿಯಲ್ಲಿ ಪ್ರಸ್ತುತವಾಗಿವೆ ಎಂಬುದನ್ನು ವಿವಿಧ ಆಯಾಮಗಳಲ್ಲಿ ಮನೋಜ್ಞವಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಮೈಸೂರು ಕರಾಡ ಬ್ರಾಹ್ಮಣ ಸಭಾದ ಅಧ್ಯಕ್ಷ ಕೃಷ್ಣಮೋಹನ ಭಟ್ ಹಾಗೂ ಪದಾಧಿಕಾರಿಗಳು, ಮಾತೃ ಸಂಘದ ಅಧ್ಯಕ್ಷ ರಮಾನಂದ ಎಡಮಲೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

'ಮನೆ ಮನೆಗೆ ಪಾಂಚಜನ್ಯ' ಅಭಿಯಾನಕ್ಕೆ ಶಂಖಗಳ ಕೊಡುಗೆ:

ಕಾರ್ಯಕ್ರಮದ ವಿಶೇಷ ಅಂಗವಾಗಿ ನಾವೂರಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವತಿಯಿಂದ ಹಮ್ಮಿಕೊಳ್ಳಲಾಗಿರುವ 'ಮನೆ ಮನೆಗೆ ಪಾಂಚಜನ್ಯ' ಎಂಬ ಮಹತ್ವಾಕಾಂಕ್ಷಿ ಧಾರ್ಮಿಕ ಅಭಿಯಾನಕ್ಕೆ ಶಂಖಗಳನ್ನು ಉದಾರವಾಗಿ ಕೊಡುಗೆಯಾಗಿ ನೀಡಲಾಯಿತು. ಈ ಮಹತ್ಕಾರ್ಯಕ್ಕೆ ಮುಂದಿನ ದಿನಗಳಲ್ಲಿ ಸಮಾಜದ ವಿವಿಧ ಸ್ತರಗಳ ಸಂಘ ಸಂಸ್ಥೆಗಳು ಕೈಜೋಡಿಸಿ, ಶಂಖಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಅಭಿಯಾನದ ಯಶಸ್ಸಿಗೆ ಸಹಕರಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸಲಾಯಿತು.

Community