
News · August 26, 2026
ಸಿರ್ಸಿ ವಲಯದ ಹಲವೆಡೆಗಳಲ್ಲಿ ಉಪಾಕರ್ಮ
ವರದಿ ಕೃಪೆ : ರಘು ಸ್ವಾದಿ ಸಿರ್ಸಿ
೧ . ಬಿಳಗಿ
ಇಂದು ಬಿಳಗಿಯ ಶ್ರೀ ನಾರಾಯಣ ದೇವಸ್ಥಾನದಲ್ಲಿ ಕರಾಡ ಸಮಾಜ ಬಾಂಧವರ ಋಗ್ವೇದ ಉಪಾಕರ್ಮ ಧಾರ್ಮಿಕ ಭಕ್ತಿಭಾವದಿಂದ ನೆರವೇರಿತು. ಶ್ರೀ ನಿರಂಜನ ಅರ್ಚಕ್ ಹಾಗೂ ಶ್ರೀ ಭರತ್ ಹಿರೇಕೋಡ್ ಅವರು ಕಾರ್ಯಕ್ರಮವನ್ನು ವಿಧಿವತ್ತಾಗಿ ನಡೆಸಿಕೊಟ್ಟರು. ಸಮಾಜ ಬಾಂಧವರ ಉಪಸ್ಥಿತಿಯಿಂದ ಕಾರ್ಯಕ್ರಮವು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.





೨ . ಹೊಸಬಾಳೆ
ಹೊಸಬಾಳೆಯ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಋಗ್ವೇದಿಯ ಉಪಾಕರ್ಮವು ಸಂಪನ್ನಗೊಂಡಿತು..ನಮ್ಮ ಸಮಾಜದ ಬಾಂಧವರು ಭಾಗವಹಿಸಿದ್ದರು.



೩ . ತೀರ್ಥಹಳ್ಳಿ
ತೀರ್ಥಹಳ್ಳಿ ಸಮೀಪದ ಚೀಪಿನಹಳ್ಳದಲ್ಲಿ ಕರಾಡ ಬಂಧುಗಳು ಉಪಾಕರ್ಮದಲ್ಲಿ ಭಾಗಿಯಾದರು.

CommunityHeritage
