Karada Vishwa

Article · March 25, 2026

ಯುದ್ಧೋನ್ಮಾದ

- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ

☘️☘️☘️☘️
ಗತಿಸಿಹೋಗಿದೆ ದೇಹ, ಕಳೆಯದಾಗಿದೆ ಮೋಹ, 
ಮುಗಿದಿಲ್ಲ ಇನ್ನೂ ರಕ್ತದಾಹ 
ನಾಮೇಲು ನೀ ಮೇಲು ನಮಗಿಂತ ಅವಮೇಲು,
ದೇಶ ದೇಶಗಳಲ್ಲಿ ಯುದ್ಧದಾಹ /

ಮೂರು ದೇಶಗಳೊಳಗೆ ನಡೆಯುತಿರುವಾ ಯುದ್ಧ,
ತುದಿಗಾಲಲೀ ನಿಂತು ಪಡೆಗಳು ಸನ್ನದ್ದ
ಆಗಾಗ ನಡೆಯುತಿದೆ ಕ್ಷಿಪಣಿಗಳ ದಾಳಿ,
ಹೃದಯ ಹೃದಯಗಳಲ್ಲಿ ಹೊತ್ತಿಉರಿವ ದ್ವೇಶದ ಬಿರುಗಾಳಿ/

ಅವನ ಶತ್ರುವು ಈಗ ಇವನ ಸ್ನೇಹಿತನು '
ಇವನ ಶತ್ರುವು ಅವನಿಗೆ ಮಿತ್ರನಿಹನು
ಕ್ಷಿಪಣಿ ದಾಳಿಗೆ ಸಿಲುಕಿ ಬಲಿ ಹಲವು ಜೀವ,
ಹೆತ್ತವರು, ಬಂಧುಗಳು ತಡೆಯುವುದೆಂತು ನೋವ?/

ನೀರು, ಆಹಾರಕ್ಕೆ ಹಾಹಾಕಾರ,
ಮನೆ, ಆಸ್ತಿ, ಜೀವನಷ್ಟಕೆ ಸುರಿಸಿ ಕಣ್ಣೀರ
ಕೈಕಾಲು ಕಳಕೊಂಡವರಿನ್ನು ಭುವಿಗೆ ಭಾರ,
ಯುದ್ಧ ಮಾಡಿಸುವವನು ನಿಂತಿಹನು ದೂರ /   

ಕೆಲವು ದೇಹಗಳoತು ಛಿದ್ರ ವಿಚ್ಛಿದ್ರ 
ಆಸೆ ಕನಸುಗಳೆಲ್ಲ ಬಲಿ, ಬಾರದು ನಿದ್ರ 
ನೀರಿಲ್ಲನೆಲೆಯಿಲ್ಲ ಔಷಧಿಗಳಿಲ್ಲ,
ಯುದ್ಧ ನಿಲ್ಲುವ ನಿರೀಕ್ಷೆಗಳೂ ಇಲ್ಲ /

ಅಣು ಬಾಂಬು ಹಾಕುವರೆ ಎನ್ನುವುದು ಭೀತಿ,
ದೇಶವೊಂದಳಿಯುವುದೆನುವ ರೀತಿ 
ಇತರ ದೇಶಗಳ ಮೇಲೂ ಆಗಾಗ ದಾಳಿ,
ತಲೆ ಬಾಗುವವನಲ್ಲ ಎದುರಾಳಿ /

ಬೀಸಿಬರಲೂ ಬಹುದು ತುಂಬಿದ ವಿಷಗಾಳಿ,
ಆಮ್ಲಜನಕಕ್ಕೂ ವಿಷದ ಹಾವಳಿ
ಯುದ್ಧಭೂಮಿಯಲಿಳಿದು ಆ ಭದ್ರಕಾಳಿ 
ನೆತ್ತರನು ಹೀರುತಿಹಳೆನಿಸುತಿದೆ,  ನೋಡೋಣ ತಾಳಿ /

ಸಾಗರದ ಮೇಲೂ ಆ ಯುದ್ಧನೌಕೆ
ಸನ್ನದ್ದವಾಗಿಹುದು ,ಎಚ್ಚರ, ಜೋಕೆ
ಗಾಳಿಯಲು ಹಾರುತಿದೆ, ಆ ಗಗನನೌಕೆ 
ಹೊಡೆದುರುಳಿಸುವರೇ ಅದನು? ಎಂಬುದು ಶಂಕೆ /

ಜೀವವೆಂಬುದಕೇನು ಇಲ್ಲಿ ಬೆಲೆ ಇಲ್ಲ,
ಕ್ಷಣ ಕ್ಷಣಕೂ ತಲೆಗಳುರುಳುತಿಹುವಲ್ಲ 
ಅನಿಲ, ಇಂಧನದ ಸಾಗಣೆ ಕಷ್ಟವಂತೆ,
ಜಲಸಂಧಿಯಲಿ ನೌಕೆ ಸೆರೆ ಹಿಡಿವ ರಂತೆ /

ಅದೋ ಉಗುಳುತಿದೆ ಬೆಂಕಿಯಾ ಚೆಂಡು 
ಹಠ ಬಿಡದ ವ್ಯಕ್ತಿಗಳ ಹೃದಯ ಮೊಂಡು 
ಎಲ್ಲ ದೇಶಗಳಿಗೂ ಬಿತ್ತು ಯುದ್ಧದಾ ಹೊಡೆತ 
ನಿಂತು ಹೋಗಲೂಬಹುದು ಭಯದಿ ಹಲವರ ಹೃದಯ ಬಡಿತ /

☘️☘️☘️

Creative Writings
ಯುದ್ಧೋನ್ಮಾದ