Karada Vishwa

Event · August 3, 2026

ಕರಾಡ ವಿಶ್ವ ವೆಬಿನಾರ್ ಸರಣಿ -40

ದಿನಾಂಕ : 08/08/2026ರ ಶನಿವಾರ ಸಮಯ: ಸಂಜೆ 7.30ಕ್ಕೆ ವಿಷಯ : ಸನಾತನ ಸಂಸ್ಕೃತಿ ಮತ್ತು ಆಧುನಿಕತೆ ಸಂಪನ್ಮೂಲ ವ್ಯಕ್ತಿ: ಶ್ರೀಯುತ ಕೃಷ್ಣರಾಜ ಭಟ್ಟ, ಬೇಂಗ್ರೋಡಿ

ಈ ಸರಣಿ ಕಾರ್ಯಕ್ರಮದ ಅಂಗವಾಗಿ 08/08/2026ರ ಶನಿವಾರ ಸಂಜೆ 7.30ಕ್ಕೆ ಸನಾತನ ಸಂಸ್ಕೃತಿ ಮತ್ತು ಆಧುನಿಕತೆ ಎನ್ನುವ ವಿಷಯದ ಕುರಿತು ಶ್ರೀಯುತ ಕೃಷ್ಣರಾಜ ಭಟ್ಟ, ಬೇಂಗ್ರೋಡಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.

ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದ ದಿನ ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.

ಗೂಗಲ್ ಲಿಂಕ್: https://meet.google.com/ykz-gpuu-tfj


ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:

★ ಬೇಂಗ್ರೋಡಿ ಜನಾರ್ದನ ಭಟ್ಟ- ರಾಜೇಶ್ವರೀ ದಂಪತಿಯ ಜ್ಯೇಷ್ಠ ಪುತ್ರರಾಗಿ ದುಂದುಭಿ ಸಂವತ್ಸರ, ಜ್ಯೇಷ್ಠಮಾಸ, ಹುಣ್ಣಿಮೆಯ ಶನಿವಾರದಂದು (05-06-1982) ಜನನ.

★ ಬದಿಯಡ್ಕದ ಸರಕಾರಿ ಶಾಲೆಯಲ್ಲಿ 4ನೆಯ ತರಗತಿಯವರೆಗೆ ಮತ್ತು ನವಜೀವನ ಪ್ರೌಢಶಾಲೆಯಲ್ಲಿ 10ನೆಯ ತರಗತಿಯವರೆಗೆ ವಿದ್ಯಾಭ್ಯಾಸ.

★ ಶೃಂಗೇರಿ ಮಠದ ಶ್ರೀ ಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಸಾಹಿತ್ಯ, ವ್ಯಾಕರಣ ವಿದ್ವತ್, ಋಗ್ವೇದ ಅಧ್ಯಯನ.

★ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು, ಇಲ್ಲಿ ಸಂಸ್ಕೃತ ಎಮ್.ಎ. ಪದವಿ.

★ ಶೃಂಗೇರಿ ಮಠದಲ್ಲಿ ಭಾದ್ರಪದ ಮಾಸದಲ್ಲಿ, ಜಗದ್ಗುರುಗಳ ಅಧ್ಯಕ್ಷತೆಯಲ್ಲಿ ನಡೆಯುವ ಮಹಾಗಣಪತಿ ವಾಕ್ಯಾರ್ಥವಿದ್ವತ್ ಸಭೆಯಲ್ಲಿ 25 ವರ್ಷಗಳಿಂದ ವ್ಯಾಕ್ಯಾರ್ಥವನ್ನು ಮಾಡುತ್ತಿದ್ದು, ಜಗದ್ಗುರುಗಳು ಸುವರ್ಣಾಂಗುಲೀಯಕವನ್ನು (ಚಿನ್ನದ ಉಂಗುರ) ನೀಡಿ ಸನ್ಮಾನಿಸಿರುತ್ತಾರೆ.

★ ಶೃಂಗೇರಿ ಮಠದ ಅದ್ವೈತ ಶೋಧಕೇಂದ್ರದ ವತಿಯಿಂದ ಬಿಡುಗಡೆಯಾದ ಸಂಸ್ಕೃತ ಪುಸ್ತಕಗಳ ಸಂಪಾದನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

★ ಬಡಗುತಿಟ್ಟು ಯಕ್ಷಗಾನ ಮತ್ತು ದೇವರ ನೃತ್ಯವನ್ನು ಅಭ್ಯಾಸ ಮಾಡಿದ್ದು, ಕನ್ನಡ - ಸಂಸ್ಕೃತ ಲೇಖನಗಳ ರಚನೆ, ಸಂಸ್ಕೃತ ಲಘು ನಾಟಕಗಳ ರಚನೆ, ವೇದ- ಸಂಸ್ಕೃತ ತರಗತಿಗಳನ್ನು ನಡೆಸುವ ಹವ್ಯಾಸಗಳಿವೆ.

★ 20 ವರ್ಷಗಳಿಂದ ಶೃಂಗೇರಿ ಮಠದ ಪಾಠಶಾಲೆಯಲ್ಲಿ ಸಾಹಿತ್ಯ ಮತ್ತು ವ್ಯಾಕರಣ ಶಾಸ್ತ್ರಗಳ ಅಧ್ಯಾಪನ ಕಾರ್ಯ.

★ ಅವಕಾಶವಿದ್ದಾಗ ಪ್ರವಚನಗಳು ಮತ್ತು ಪೌರೋಹಿತ್ಯವನ್ನು ಮಾಡುತ್ತಿದ್ದಾರೆ.

★ ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಗಳು ದೊರಕಿವೆ.

★ ನಿಗರ್ವಿ, ಮಿತಭಾಷಿ, ಹಸನ್ಮುಖಿ.

Webinar
ಕರಾಡ ವಿಶ್ವ ವೆಬಿನಾರ್ ಸರಣಿ -40