Karada Vishwa

Article · November 2, 2026

ಈಕೆ ಗಾಂಧಾರಿ...

By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಈಕೆ ನೂರ ಒಂದು ಜನ ಕೌರವರ ತಾಯಿಯಲ್ಲ,
ಧೃತರಾಷ್ಟ್ರನ ಪತ್ನಿಯೂ ಅಲ್ಲ!
ಕುರುವಂಶದ ಕುಲವಧುವoತೂ ಅಲ್ಲವೇ ಅಲ್ಲ /

ಕಣ್ಗಳಿಗೆ ಬಟ್ಟೆ ಕಟ್ಟಿಕೊಂಡವಳಲ್ಲ,
ಮನುಷ್ಯನ ಕಣ್ಣುರಿಸಿ ಬಟ್ಟೆ ಕಟ್ಟಿಕ್ಕೊಳ್ಳುವಂತೆ ಮಾಡುವ
ಆಧುನಿಕ ಗಾಂಧಾರಿ ಸುರಸುಂದರಿ /

ಈಕೆ ಕ್ಷತ್ರಿಯಳಲ್ಲ, ಸಸ್ಯ ಕುಲ ಸಂಜಾತೆ
ಆಹಾರವಾಗಬಲ್ಲವಳು
ರುಚಿಯೊಳು ಬಲು ಖಾರವಂತೆ /

ಬಡವ, ಸಿರಿವಂತ,ಎನ್ನುವ ಮೇಲು ಕೀಳಿಲ್ಲದೆ
ಎಲ್ಲರ ಮನೆಯಂಗಳದಿ ಪುಟ್ಟಗಿಡದಿ ಬೆಳೆವ
ಇವಳೂ ಗಾಂಧಾರಿಯೇ /

ಹಕ್ಕಿಪಕ್ಕಿಗಳು, ಗಿಳಿಗಳು
ಇಷ್ಟಪಟ್ಟು ತಿನ್ನುವ ಈಕೆ
ಶುಕಪ್ರಿಯೆ /

ಗಾತ್ರದಲ್ಲಿ ಬರಿ ಚಿಕ್ಕವಳು
ಎಂದು ಕಡೆಗಾಣಿಸುವಂತಿಲ್ಲ
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು /

ಈಕೆ ಖಾರ ಅಹಂಕಾರವಲ್ಲ!

Creative Writings