Karada Vishwa

Article · October 21, 2026

ದೇವಿ ಶಾರದೆ

By ಗಾಯತ್ರಿ ಕೆ ನಾಗರಾಜ. ಕೃಷ್ಣಗಾನಂ

ಗಾಯತ್ರಿ ಕೆ ಅಡ್ಕತೊಟ್ಟಿ


ಆದಿಗುರುಗಳಿಗೊಲಿದು ಬಂದ
ಶೃಂಗನಗರಿಯ ದೇವತೆ
ತುಂಗಾಜಲದಿ ಮಿಂದು ಬಂದರೆ
ಪಾಪವೆಲ್ಲವ ತೊಳೆವೆಯೆ

ವೀಣೆಯನ್ನು ಪಿಡಿದು ನಿಂತ
ನಾದರೂಪಿಣೆ ಶಾರದೆ
ಗಾನಸುಧೆಯ ಸುರಿಸಿ ನಿಂದರೆ
ಮನವ ಮುದದಿ ಬೆಳಗುವೆ

ಬುದ್ಧಿಯನ್ನು ನೀಡುವಂಥ
ಬ್ರಹ್ಮರಾಣಿ ಸುರಪೂಜಿತೆ
ಶುದ್ಧ ಮನದಿ ನೆನೆದು ಬೇಡಲು
ಸನ್ನಡತೆಯ ದಾರಿ ತೋರುವೆ

ಮಾತಂಗಿರೂಪಿಣಿ
ಮಾತಿನೊಡತಿ
ವಾಗ್ದೇವಿ ನೀನೇ ಅಲ್ಲವೇ
ಮಾತು ಬಾರದ ಜನರಿಗೆಲ್ಲ
ಅಭಯಹಸ್ತ ಚಾಚುವೆ

ಹಂಸವನ್ನು ಏರಿ ನಿಂದ
ಶುಭ್ರವಸ್ತ್ರ ಶೋಭಿತೆ
ಕೃಪೆಯಿಂದಲಿ ಒಲಿದು ಬಂದು
ವಿದ್ಯಾಬುದ್ಧಿಯ ನೀಡುವೆ

Creative Writings