Karada Vishwa

Article · November 15, 2026

ಮುಕ್ತಕ

By ಸೌಮ್ಯ ಗುರು ಕಾರ್ಲೆ

ಸೌಮ್ಯ ಗುರು ಕಾರ್ಲೆ

ಜೀವನದಲ್ಲಿ ಮುಕ್ತ ನಗೆಯ ಮರೆಮಾಚಿ ಅನಗತ್ಯ ಗಾಂಭೀರ್ಯ ಪಕಟಿಸಪಡಿಸುವವನ ತೊಳಲಾಟದ ಕುರಿತು...ಮುಕ್ತಕ

ಮುಸುಕಿನೊಳ ಮೌನದಲಿ ಗುದ್ದಾಟ ತೊಳಲಾಟ
ಕಸಿವಿಸಿಯ ಕಂಬಳಿಯು ಚುಚ್ಚಿ ನೋಯಿಪುದೆ ?
ಬಿಸಿಬಿಸಿಯ ನಿಟ್ಟುಸಿರಿನಾಡಳಿತ ಸಹಿಸೆಯೇನ್
ನಸುನಗೆಯ ಮದ್ದುಣಿಸು ಭಾವಲತೆಯೆ

Creative Writings