Karada Vishwa

News · November 1, 2026

ಅಭಿನಂದನೆಗಳು – ಶಿಖಾ ಎಂ. ಭಟ್

ಕರಾಡ ವಿಶ್ವದ ಅಭಿನಂದನೆಗಳು

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶೇ. 95.75 ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ ಕರಾಡ ಸಮಾಜದ ಪ್ರತಿಭೆ ಕುಮಾರಿ ಶಿಖಾ ಎಂ. ಭಟ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಪ್ರಸ್ತುತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶಿಖಾ, ಮರ್ದಂಗೆರೆಯ ಗಣೇಶ್ ಎಂ. ಭಟ್ ಮತ್ತು ಸಂಧ್ಯಾ ಗಣೇಶ್ ದಂಪತಿಗಳ ಪುತ್ರಿ. ವಿದ್ಯಾಭ್ಯಾಸದ ಜೊತೆಗೆ ಶಾಸ್ತ್ರೀಯ ನೃತ್ಯದಲ್ಲಿಯೂ ವಿಶೇಷ ಆಸಕ್ತಿ ಹೊಂದಿರುವ ಶಿಖಾ, ತನ್ನ ಆಸಕ್ತಿ, ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಈ ಗಮನಾರ್ಹ ಸಾಧನೆ ಮಾಡಿದ್ದಾಳೆ.

ಈ ಸಾಧನೆಗೆ ಮಾರ್ಗದರ್ಶನ ನೀಡಿದ ಗುರುಗಳಾದ ವಿದುಷಿ ವಿದ್ಯಾಲಕ್ಷ್ಮಿ ಹಾಗೂ ವಿದುಷಿ ಶ್ರುತಿ ಅವರಿಗೆ ಅಭಿನಂದನೆಗಳು.

ಶಿಖಾ ಅವರ ಕಲಾಸಾಧನೆಯ ಪಯಣಕ್ಕೆ ಈ ಯಶಸ್ಸು ಮತ್ತಷ್ಟು ಪ್ರೇರಣೆಯಾಗಲಿ. ನೃತ್ಯಕಲೆಯ ಆರಾಧನೆಯಲ್ಲಿ ಹೀಗೆಯೇ ಮುನ್ನಡೆಯುತ್ತಾ, ಇನ್ನೂ ಅನೇಕ ಉನ್ನತ ಸಾಧನೆಗಳನ್ನು ತಮ್ಮದಾಗಿಸಿಕೊಳ್ಳಲಿ ಎಂದು ಕರಾಡ ವಿಶ್ವ ಹಾರೈಸುತ್ತದೆ.

AchieversArtWomen