
Article · February 3, 2026
2.0 ರ ಸರದಿ
ಕವಯಿತ್ರಿ : ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
🪻🪻🪻🪻
ತುಳುನಾಡ ವಾರ್ತೆಯಲಿ
ಬಂದಿತೀ ವರದಿ /
ಬಿಡುಗಡೆಯ ಸಾಲಿನಲಿ
ಕರಾಡ ವಿಶ್ವ - 2 ರ ಸರದಿ /
ಸಮುದಾಯದಲಿ ತುಂಬಿ
ಸಂತಸವು ಭರದಿ /
ಎಲ್ಲರಾ ಬಾಯಲ್ಲಿ
ಇದರದೇ ಸುದ್ದಿ /
ಆಕ್ಷಣವೆ ಎತ್ತಿಕೊಂಡರು
ಮೊಬೈಲ್, ಕರದಿ /
ಸಂಭ್ರಮವು, ದಾಟಿದಂ
-ತೆಯೆ ದೊಡ್ದ ಶರಧಿ /
Creative Writings
