Karada Vishwa

News · June 13, 2026

ಕೇರಳ - ಪ್ಲಸ್ ಟು ಪರೀಕ್ಷೆಯಲ್ಲಿ ಮಿಂಚಿದ ಕರಾಡ ಪ್ರತಿಭೆಗಳು (2026)

ಎಲ್ಲ ಪ್ರತಿಭಾನ್ವಿತರಿಗೂ ಕರಾಡ ವಿಶ್ವದ ವಿಶೇಷ ಅಭಿನಂದನೆಗಳು ...

ಹೃಷಿಕೇಶ್ ದಂಡೆಪ್ಪಾಡಿ



ಶ್ರೀಕುಮಾರ್ ದಂಡೆಪ್ಪಾಡಿ ಇವರ ಪುತ್ರರಾದ ಹೃಷಿಕೇಶ್ ಇವರು  ಪೊಟ್ಟಶ್ಶೇರಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನ ವಿಭಾಗ (PCMC)ದಲ್ಲಿ ವ್ಯಾಸಂಗ ಮಾಡಿ ಪೂರ್ಣ A+ ಶ್ರೇಣಿ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

Hrishikesh, son of Sreekumar Dandappadi, has achieved outstanding success by securing Full A+ in the Science stream (PCMC) at Government Higher Secondary School, Pottasseri. His remarkable accomplishment reflects his hard work, dedication, and academic excellence.


ಪ್ರಣತಿ


ಶ್ರೀ ರಾಧಾಕೃಷ್ಣ ಭಟ್ ಮತ್ತು ಶ್ರೀಮತಿ ಶಶಿಕಲಾ ಭಟ್ ದಂಪತಿಯ ಪುತ್ರಿ ಪ್ರಣತಿ, ಪೆರ್ಲ – ಪೊಯ್ಯೆ ಮನೆತನದ ಪ್ರತಿಭಾವಂತ ವಿದ್ಯಾರ್ಥಿನಿ. ಕಾಸರಗೋಡಿನ ಎಡನೀರ್‌ನ HHSIBS ಶಾಲೆಯಲ್ಲಿ ವಿಜ್ಞಾನ ವಿಭಾಗ (PCMB)ದಲ್ಲಿ ವ್ಯಾಸಂಗ ಮಾಡಿ ಎಲ್ಲಾ ವಿಷಯಗಳಲ್ಲೂ A+ ಫಲಿತಾಂಶ ಗಳಿಸಿದ್ದಾರೆ. ಶೈಕ್ಷಣಿಕ ಸಾಧನೆಯ ಜೊತೆಗೆ ಭಾರತ ಸಂಸ್ಕೃತಿ ಪ್ರತಿಷ್ಠಾನದ ಮಹಾಭಾರತ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಿರುವ ಅವರು, ಕರ್ನಾಟಕ ಸಂಗೀತ ಹಾಗೂ ಭರತನಾಟ್ಯ ಜೂನಿಯರ್ ಪರೀಕ್ಷೆಗಳನ್ನು ಡಿಸ್ಟಿಂಕ್ಷನ್‌ನೊಂದಿಗೆ ಪಾಸಾಗಿದ್ದರು. ವಿದ್ಯೆ, ಸಂಸ್ಕೃತಿ ಹಾಗೂ ಕಲೆಯಲ್ಲಿ ಸಮಾನ ಆಸಕ್ತಿ ಹೊಂದಿರುವ ಪ್ರಣತಿ ನಮ್ಮ ಸಮಾಜದ ಹೆಮ್ಮೆಯ ಪ್ರತಿಭೆ.
Pranathi, daughter of Radhakrishna Bhat and Shashikala Bhat, from the Poyye family of Perla, has secured A+ grades in all subjects in the Science stream (PCMB) from HHSIBS School, Edneer, Kasaragod. In addition to her academic excellence, she had won a Gold Medal in the Mahabharata Examination conducted by Bharata Samskruti Pratishthana and passed the Junior examinations in Carnatic Music and Bharatanatyam with Distinction. With her equal passion for academics, culture, and the arts, Pranathi is a talented young achiever and a matter of pride for our community.


ಅದಿತಿ ಎಸ್.


ಶ್ರೀ ಎಸ್. ಪುರುಷೋತ್ತಮ ಭಟ್ ಮತ್ತು ಶ್ರೀಮತಿ ರಾಜೇಶ್ವರಿ ಎಂ. ಅವರ ಪುತ್ರಿ ಅದಿತಿ ಎಸ್., ಸಜಂಕಿಲ ಮನೆತನದ ವಿದ್ಯಾರ್ಥಿನಿ. ಪಾಲಕ್ಕಾಡಿನ MNKMHSS ಚಿಟ್ಟಿಲಂಛೇರಿ ಶಾಲೆಯಲ್ಲಿ ವಾಣಿಜ್ಯ ವಿಭಾಗದಲ್ಲಿ (ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಇಕಾನಾಮಿಕ್ಸ್ ಹಾಗೂ ಸ್ಟ್ಯಾಟಿಸ್ಟಿಕ್ಸ್) ವ್ಯಾಸಂಗ ಮಾಡಿ 95.92% ಅಂಕಗಳೊಂದಿಗೆ ಪೂರ್ಣ A+ ಗ್ರೇಡ್ ಪಡೆದು ಸಾಧನೆ ಮಾಡಿದ್ದಾರೆ. 

Aditi S., daughter of S. Purushothama Bhat and Rajeshwari M., belonging to the Sajankila family, has secured Full A+ with an impressive score of 95.92% in the Commerce stream (Business Studies, Accountancy, Economics, and Statistics) from MNKMHSS Chittilamchery, Palakkad.


ಸಿರಿ ಕೆ.


ಶ್ರೀ ಕಾರ್ತಿಕ್ ಮತ್ತು ಶ್ರೀಮತಿ ಶುಭಾ ಅವರ ಪುತ್ರಿ ಸಿರಿ ಕೆ., ಕೋಳಿಕ್ಕಜೆ ಮನೆತನದ ಪ್ರತಿಭಾವಂತ ವಿದ್ಯಾರ್ಥಿನಿ. ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆ, ಅಗಲ್ಪಾಡಿಯಲ್ಲಿ ವಿಜ್ಞಾನ ವಿಭಾಗ (PCMB)ದಲ್ಲಿ ವ್ಯಾಸಂಗ ಮಾಡಿ ಪೂರ್ಣ A+ ಫಲಿತಾಂಶ ಗಳಿಸಿದ್ದಾರೆ. ಶೈಕ್ಷಣಿಕ ಸಾಧನೆಯ ಜೊತೆಗೆ ಬ್ಯಾಡ್ಮಿಂಟನ್‌ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಅವರು, ಬಾಲ್ ಬ್ಯಾಡ್ಮಿಂಟನ್ ಹಾಗೂ ತ್ರೋಬಾಲ್‌ನಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ಶಾಲಾ ಕಲೋತ್ಸವದಲ್ಲಿಯೂ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ವಿದ್ಯಾಭ್ಯಾಸ ಹಾಗೂ ಕ್ರೀಡೆ ಎರಡರಲ್ಲೂ ಸಾಧನೆ ಮಾಡಿದ ಸಿರಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
Siri K., daughter of Karthik and Shubha, belonging to the Kolikkaje family, has secured Full A+ in the Science stream (PCMB) from Sri Annapoorneshwari Higher Secondary School, Agalpady. Alongside her academic excellence, she has distinguished herself in sports, having been selected for district-level badminton and participated at the state level in Ball Badminton and Throwball. She has also showcased her talents at the district-level School Kalolsavam. Excelling in both academics and sports, Siri stands as an inspiring role model for the younger generation.



💐💐💐💐💐💐💐
AchieversEducation