Karada Vishwa

Event · March 19, 2025

ಕರಾಡ ವಿಶ್ವ ವೆಬಿನಾರ್ ಸರಣಿ -22

22/03/2025ರ ಶನಿವಾರ ಸಂಜೆ 7.30ಕ್ಕೆ; ವಿಷಯ: ಆಹ್ನಿಕ ; ಸಂಪನ್ಮೂಲ ವ್ಯಕ್ತಿ : ಶ್ರೀಯುತ ಶಶಿಧರ ಪಾತನಡ್ಕ

ಗೂಗಲ್ ಲಿಂಕ್: https://meet.google.com/jwo-yvyb-etc
ಈ ಸರಣಿ ಕಾರ್ಯಕ್ರಮದ ಅಂಗವಾಗಿ 22/03/2025ರ ಶನಿವಾರ ಸಂಜೆ 7.30ಕ್ಕೆ ಆಹ್ನಿಕ ಎನ್ನುವ ವಿಷಯದ ಕುರಿತು ಶ್ರೀಯುತ ಶಶಿಧರ ಪಾತನಡ್ಕ ಇವರು ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.

ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗೆ ಕೊಟ್ಟ ಲಿಂಕ್ ಮೂಲಕ ಕಾರ್ಯಕ್ರಮ ನಡೆಯುವ ದಿನದಂದು ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.

ಕಾರ್ಯಕ್ರಮ ನಿರ್ವಹಣೆ ಮತ್ತು ಸ್ವಾಗತ : ಶ್ರೀಮತಿ ಅಕ್ಷತಾ ವೇಣುಗೋಪಾಲ್ ಕನಿಯಾಲ

ಪ್ರಾರ್ಥನೆ :ಕುಮಾರಿ ಅವ್ಯುಕ್ತಾ ಕನಿಯಾಲ

ನಿತ್ಯ ಪಂಚಾಂಗ : ಶ್ರೀ ನಾಗರಾಜ ಉಪ್ಪಂಗಳ

ಸಂಪನ್ಮೂಲ ವ್ಯಕ್ತಿ ಪರಿಚಯ : ಶ್ರೀ ವೇಣುಗೋಪಾಲ ಕನಿಯಾಲ

ವಿಷಯ ಮಂಡನೆ, ಸಂವಾದ : ಶ್ರೀ ಶಶಿಧರ ಭಟ್ ಪಾತನಡ್ಕ

ಕರಾಡ ವಿಶ್ವ ಕುರಿತು : ಶ್ರೀ ಸತ್ಯ ಶಂಕರ ಬೆಂದ್ರೋಟು

ಧನ್ಯವಾದ : ಶ್ರೀ ಸುಬ್ರಮಣ್ಯ ಭಟ್ ಕುದ್ಕುಳಿ


ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:

* ಪಾತನಡ್ಕ ವೆಂಕಟರಮಣ ಭಟ್ - ಲಕ್ಷ್ಮೀ ದಂಪತಿಗಳ ಪುತ್ರ.

* 1979ರಲ್ಲಿ ಜನನ, SSLC ವರೆಗೆ ವಿದ್ಯಾಭ್ಯಾಸ.

* ನಂತರ 6 ವರ್ಷ ಕಂಚಿಯಲ್ಲಿ ಚಂದ್ರಶೇಖರ ಶಾಸ್ತ್ರಿಗಳಲ್ಲಿ ಋಗ್ವೇದ ಮೂಲ ಅಧ್ಯಯನ.

* 2 ವರ್ಷ ಸತಾರಾದಲ್ಲಿ ಅಧ್ಯಾಪನ.

* ಗುರು ಇಟ್ಟಿಣ್ಣನವರ ಆಶೀರ್ವಾದದಿಂದ ಊರಿನಲ್ಲಿ ವೈದಿಕ ಕರ್ಮ ಪ್ರಾರಂಭ.

* ಬಳ್ಳಪ್ಪದವು ಮಾಧವ ಉಪಾಧ್ಯಾಯ, ಬಡಕ್ಕೇಕರೆ ಗೋವಿಂದ ಭಟ್ಟರ ಅನುಗ್ರಹದಿಂದ ತಂತ್ರಪಾಠ ಕಲಿಕೆ.

* ಕೋರೋತ್ತ್ ರಾಮಕೃಷ್ಣ ಮಾರಾರ್ ಅವರಿಂದ ದೇವೀ ನೃತ್ಯ ಅಭ್ಯಾಸ.

* ಕುಂಟಾರು ಸುಬ್ರಾಯ ತಂತ್ರಿ, ಹಾಗೂ ರವೀಶ ತಂತ್ರಿಯವರಿಂದ ಮಂತ್ರವಾದ, ಮಾಟ, ಮಂತ್ರಗಳ ರಹಸ್ಯದ ತಿಳುವಳಿಕೆಯ ಕಲಿಕೆ.

* ಒಂದಷ್ಟು ಕಾಲ ಕೊಯಂಬತ್ತೂರಿನಲ್ಲಿ ಕಂಪನಿಯಲ್ಲಿ ಉದ್ಯೋಗ.

* ಆಹಿತಾಗ್ನಿ ದೀಕ್ಷಿತ ಗೋವಿಂದ ಪ್ರಕಾಶ ಘನಪಾಠಿಗಳಲ್ಲಿ ವೇದಪಾಠ, ಧರ್ಮ ಶಾಸ್ತ್ರಗಳ ಆಳವಾದ ಅಧ್ಯಯನ ಹಾಗೂ ಅಧ್ಯಾಪನ.

* ಹನ್ನೆರಡು ವರ್ಷಗಳಿಂದ ಬೆಂಗಳೂರಿನ ಉತ್ತರ ಹಳ್ಳಿಯಲ್ಲಿ ವಾಸ, ಪ್ರತಿಯೊಬ್ಬರನ್ನೂ ಧಾರ್ಮಿಕರನ್ನಾಗಿಸುವ ಸದಾಶಯ.

* ಅಗಲ್ಪಾಡಿಯಲ್ಲಿ ನಡೆಸಿದ ವಸಂತ ವೇದಶಿಬಿರಗಳಿಂದ ಆಸಕ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಪೂರ್ಣ ವಿದ್ಯಾಭ್ಯಾಸಕ್ಕೆ ಹಲವಾರು ಉತ್ತಮ ಗುರುಕುಲಕ್ಕೆ ಕಳುಹಿಸಿ ಸಲಕ್ಷಣ ಘನಾಂತ ಪೂರ್ಣಗೊಳಿಸಲು ದಾರಿದೀಪವಾಗಿರುತ್ತಾರೆ

* ಗಾಯತ್ರಿ ಜಪ ಮಾಡುತ್ತಿದ್ದವರು ಸಂಧ್ಯಾವಂದನೆ ಮಾಡುತ್ತಿದ್ದಾರೆ‌. ಎಲ್ಲಾ ಬಿಟ್ಟವರು ಜಪ ಪ್ರಾರಂಭ ಮಾಡಿರುತ್ತಾರೆ.

* ಆಸಕ್ತರಿಗೆ ಶ್ರದ್ಧೆಯಿಂದ ನಿತ್ಯ ಪೂಜೆ, ಗಣಪತಿ ಹವನ, ದುರ್ಗಾ ಪೂಜೆ, ಶ್ರಾದ್ಧ, ಸಪ್ತಶತಿ ಮುಂತಾದ ಅನುಷ್ಠಾನಕ್ಕೆ ಅನುಕೂಲ ಪಾಠಗಳನ್ನು ಶುಲ್ಕವಿಲ್ಲದೇ ಬೋಧನೆ.

* ಜೀವನ ನಿರ್ವಹಣೆಗಾಗಿ ಪೌರೋಹಿತ್ಯ ನಡೆಸುತ್ತಿದ್ದಾರೆ. ನಿತ್ಯಾನುಷ್ಠಾನದಿಂದ ಬಾಳುವ ಗುರಿ. ಧರ್ಮ, ವೇದಕರ್ಮ, ಅಧ್ಯಾಪನದಲ್ಲಿ, ಭಗವಂತನ ಹಾಗೂ ಸತ್ಯದ ವಿಷಯಗಳಲ್ಲಿ ಆಸಕ್ತಿ.

* ಪತ್ನಿ ಶ್ರೀಮತಿ ಶ್ರೀ ಗೌರಿ. ಪುತ್ರಿಯರು ಶ್ರೀಲಕ್ಷ್ಮೀ, ಶ್ರೀದುರ್ಗಾ.

Webinar
ಕರಾಡ ವಿಶ್ವ ವೆಬಿನಾರ್ ಸರಣಿ -22