
Article · August 15, 2026
ನನ್ನ ಭಾರತ ನನ್ನ ಹೆಮ್ಮೆ
By ಗಾಯತ್ರಿ ನಾಗರಾಜ
- ಗಾಯತ್ರಿ ಕೆ ನಾಗರಾಜ್
ದೇಶ ಭಕ್ತಿಗೀತೆ
ನನ್ನ ದೇಶವು ಭರತ ಭೂಮಿಯು
ಧನ್ಯತೆಯ ಅಭಿಮಾನವು
ಜನ್ಮ ಪಾವನ ಮನದಿ ಹರುಷವು
ಪುಣ್ಯಧಾಮದ ನೆಲೆಯಿದು.
ಧರ್ಮ ಸಂಸ್ಕೃತಿ ಜಗದಿ ಕೀರುತಿ
ಜಗಕೆ ಇದುವೇ ಸಾರಥಿ
ಸತ್ಯ ಅಹಿಂಸೆ ನ್ಯಾಯ ನೀತಿ
ಮೂಡಿಸುವುದು ಜಾಗೃತಿ.
ನನ್ನ ನಾಡಿದು ಪ್ರಬುದ್ಧ ಬೀಡಿದು
ಸಮಾನತೆಯ ಉಸಿರಿದು
ವಿವಿಧತೆಯಲಿ ಏಕತೆಯ ಸಾರಿದ
ಪರಮಪವಿತ್ರ ಭುವಿಯಿದು.
ಸೈನಿಕನ ತ್ಯಾಗದಲ್ಲಿ ಗಡಿಯು
ನಿತ್ಯಕಾವಲು ನಿಂತಿದೆ
ನಾರಿಮಣಿಯರ ಶಕ್ತಿ ಬೆಳಕಲಿ
ಕುಟುಂಬ ಪೂರ್ತಿ ಬೆಳಗಿದೆ
ಕೃಷಿಕನ ಬೆವರಿಂದ ಹಸಿರು
ಚಿಗುರಿದೆ ಬೆಲೆ ಫಸಲಿದೆ
ಹೈನು ಕೈಗಾರಿಕೆಯ ಬಲದಿ
ದೇಶ ಸಂಪದವಾಗಿದೆ
ಗಂಗೆಯ ಹರಿವಲ್ಲಿ ಶುದ್ಧತೆ
ಹಿಮಗಿರಿಗಳಲಿ ದೃಢ ಧೈರ್ಯವು
ಶಿಲ್ಪಕಲೆ ಆಚಾರ ಗತಿಗಳು
ಲೋಕಗುರು ಎಂದೆನಿಸಿದೆ.
Creative Writings
