Karada Vishwa

Article · November 27, 2026

ಶ್ರೀ ಗುರುದೇವ ಸ್ತುತಿ

By ಗಾಯತ್ರಿ ನಾಗರಾಜ

ಗಾಯತ್ರಿ ಕೆ ಅಡ್ಕತೊಟ್ಟಿ

ಶ್ರೀ ಗುರುದೇವನೆ ವಂದಿಸುವೆ
ತ್ರಿಮೂರ್ತಿರೂಪನೆ ಪೂಜಿಸುವೆ।

ಹಬ್ಬಿದ ಅಜ್ಞಾನವ ತೊಲಗಿಸಿ
ಜ್ಞಾನದ ಜ್ಯೋತಿಯ ಬೆಳಗಿಸು
ಆತ್ಮ ತತ್ತ್ವವ ನೀ ಸ್ಪುರಿಸು |

ದುರಾಲೋಚನೆಗೆ ವಿಮೋಚನೆ ನೀಡಿ
ಶುದ್ಧ ಮನವನು ಅನುಗ್ರಹಿಸು
ತಾಪತ್ರಯಗಳ ಬಡಿದೋಡಿಸು ||

ಮತಿರಹಿತನು ನಾ ಸುಮತಿಯ ಕರುಣಿಸು ಅತುಲಪರಾಕ್ರಮಿ ಘನ ಮಹಿಮ
ಅಮರವಂದಿತ ಶ್ರೀ ವಿಶ್ವೇತ್ತಮ ||

Creative Writings