Karada Vishwa

Article · September 18, 2026

ಕತ್ತಲಿನಿಂದಾ ಬೆಳಕಿನ ಕಡೆಗೆ....

By ಜಯಶ್ರೀ ಕೆ.ಆರ್ ಭಟ್, ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ನಿಲ್ಲದ ಜೀವನ ಯಾತ್ರೆಯಲ್ಲಿ ಒಲವು ತೋರಿಸುವ ಜೀವಗಳು ಜೊತೆಗಿದ್ದರೆ ಜೀವನ ಪ್ರಯಾಣ ಸ್ವಲ್ಪ ಹಗುರವೆನಿಸುತ್ತದೆ. ಇಲ್ಲದಿದ್ದರೆ ಜೀವನ ಭಾರವೆನಿಸುತ್ತದೆ......... ನಂಬಿಕೆ ವಿಶ್ವಾಸಗಳು ಇದ್ದರೆ ಮಾತ್ರ...

ಕತ್ತಲಿನಿಂದಾ ಬೆಳಕಿನ ಕಡೆಗೇ
ಮನುಜನೆ ನಿನ್ನಯ ಯಾನ/

ನಿತ್ಯ ನಿರಂತರ ಸಾಗುತಲಿಹುದೂ
ಜೀವನದುದ್ದ ಪ್ರಯಾಣ /

ಪ್ರೀತಿ,ಪ್ರೇಮ, ಸ್ನೇಹ ತುಂಬಿ
ಉರಿಸಿಡು ಒಲವಿನ ದೀಪ /

ಹಾದಿಯುದ್ದಕೂ ಬೆಳಕನ್ನೀಯಲಿ
ಸುಂದರ ಪ್ರಣತಿ ಪ್ರದೀಪ /

ಸಂಸಾರವೆನ್ನುವಾ ಬಂಧದ ನಡುವೇ
ಸಾಗಬೇಕಿದೆ ಹಾದಿ

ಪ್ರೀತಿ ಒಲವು ಇದ್ದರೆ ತಾನೇ
ದೀಪವು ಭದ್ರ ಬುನಾದಿ /

ಅರಿಷಡ್ವರ್ಗದ ತಿಮಿರವ ಕಳೆಯಲು
ಹಚ್ಚಿಡು ನಂಬಿಕೆ ದೀಪ /

ಹಚ್ಚಿದ ದೀಪ ಉರಿಯುತಲಿರಲೀ
ಅದುವೇ ದೈವ ಸ್ವರೂಪ /

ಸಾಲು ಸಾಲು ಆ ಹಣತೆಯನಿರಿಸೀ
ಉರಿಸಿಡು ಒಲವಿನ ದೀಪ /

ಒಳಿತನ್ನೀಯಲಿ ಒಳಿತನ್ನೀಯಲಿ
ಒಳಗಿಹ ಆತ್ಮ ಸ್ವರೂಪ /

Creative Writings