
Article · October 24, 2026
ಶ್ರಮದಿಂದ ಭಾಗ್ಯ
By ಗಾಯತ್ರಿ ನಾಗರಾಜ ಕೃಷ್ಣಗಾನಂ ಅಡ್ಕತ್ತೊಟ್ಟಿ
ಗಾಯತ್ರಿ ಕೆ ಅಡ್ಕತೊಟ್ಟಿ
ದುಡಿದು ತಿನ್ನುವ ಕೈಗಳಿಗೆ ಸಿಗುವ ಸುಖವೇ ಬೇರೆ ನಿತ್ಯ ದುಡಿಮೆಯಿಂದ ಆರೋಗ್ಯವೂ ಲಭ್ಯ ಸಂತೋಷವೂ ಜೊತೆಗೆ ಸಿಗಬಲ್ಲುದು
ಶ್ರಮದಿಂದ ಭಾಗ್ಯ ಜೊತೆಗೆ ಆರೋಗ್ಯ
ಇದರಿಂದ ದೊರಕುವುದು ಸಕಲ ಸೌಭಾಗ್ಯ
ಬೆವರ ಹನಿಯೇ ನಿತ್ಯದ ಮಂತ್ರಾಕ್ಷತೆ,
ದುಡಿಮೆಯೇ ಬದುಕಿನ ಸತ್ಯ ಪಥ
ಮಣ್ಣಿನೊಡನೆ ಬೆರೆತರೆ ಮೈಗೆ ಕಾಂತಿ
ಮನದೊಳು ಮೂಡುವುದು ನಿತ್ಯದ ಶಾಂತಿ
ಸುಮ್ಮನೆ ಕುಳಿತವಗೆ ಅನ್ನವೂ ಕಲ್ಲು
ದುಡಿದು ಉಂಡವಗೆ ಗಂಜಿಯೂ ಹೊನ್ನು
ಸೋಮಾರಿತನವೆ ರೋಗಕೆ ಹೆಬ್ಬಾಗಿಲು
ಶ್ರಮವೇ ಆರೋಗ್ಯದ ದಿವ್ಯ ಮಡಿಲು
ಬೀಗದ ಕಪಾಟಿನಲಿ ಭಾಗ್ಯವೆಂಬುದು ಇಲ್ಲ
ಬಿರುಕು ಬಿಟ್ಟ ಅಂಗೈಲಿ ನೆಲೆಸಿಹುದು ಖಚಿತ
ಹಾಸಿಗೆಯಲಿ ಹೊರಳಿದರೆ ಕ್ಷಣಿಕ ಸುಖವು
ಗದ್ದೆಯಲಿ ದುಡಿದರೆ ಕೈಯಲಿ ಜಗವು
ಆದುದರಿಂದ ಕೇಳೆಲೆ ಮಂಕು ಮಾನವನೆ
ಕೈಗಿರುವ ಕಾಯಕವೇ ನಿಜ ದೇವನೆ
ಭಾಗ್ಯವೂ ಆರೋಗ್ಯವೂ ಬೇರೆ ಎಲ್ಲೂ ಇಲ್ಲ
ನಿನ್ನ ದುಡಿಮೆಯ ಹನಿಯಲ್ಲೇ ಅಡಗಿಹುದು ಎಲ್ಲ
Creative Writings
