Karada Vishwa

Article · July 14, 2026

ಭಾಷ್ಪಾಂಜಲಿ

--ವೀಣಾ ಎಂ ಭಟ್

ಪ್ತಸ್ವರಗಳ ಗಾನ ಕೋಗಿಲೆಗೆ ನುಡಿ ನಮನ

ಸಾಧಿಸಿದೆ ಇಹದಲ್ಲಿ ಕೀರ್ತಿಯ ಹೆಸರನ್ನ

ಸಿರಿದೇವತೆಯು ನೀನು ಗಾನ ಲೋಕದಲಿ

ಸೀಮಿತ ನಿನಗೆ ಮಧುರ ಕೋಗಿಲೆ ನಾಮದಲ್ಲಿ

ಸುಮಧುರ ಸುಗಂಧದ ಗಾನ ಲೋಕದಿ ಇಂದು

ಸೂತ್ರಧಾರನು ಸೆಳೆದು ಜಗಕೆ ದುಃಖವ ತಂದು

ಸೆಳೆದೊಯ್ದನೊ ನಿನ್ನ ಹಾಡು ಆಲಿಸಲಲ್ಲಿ

ಸೇರಿದೆಯ ಸ್ವರ್ಗಕೆ ಹಾಡುವ ತವಕದಲಿ

ಸೈ ಎನ್ನುವರೆಲ್ಲ ಜಾನಕಿಯ ಕಂಠಸಿರಿಗೆ ಮಣಿದು

ಸೊಗಸು ತುಂಬಿದೆ ಇಲ್ಲಿ ದೈವದತ್ತ ಎಂದು

ಸೋಜಿಗವು ಕ್ಲಿಷ್ಟಕರ ಹಾಡಿನಲು ಮುಂದು

ಸೌಭಾಗ್ಯವು ನಿನಗೆ ಹುಟ್ಟಲ್ಲಿ ಬೆಸೆದ ಕೊಡುಗೆ

ಸಂಗೀತ ರಾಜ್ಯದಲಿ ರಾಣಿಯಾಗಿ ಮೆರೆದೆ

ಸಹಯೋಗ ಭಕ್ತಿ ಭಾವ ಪ್ರೇಮ ಗೀತೆಯಲಿ ಒಂದಾದೆ

ನಿಸರ್ಗದ ಮಡಿಲಿಂದ ಸ್ವರ್ಗಕೆ ನಿನ್ನ ನಡೆ

ಅಕ್ಷರ ಮಾಲೆಯಲಿ ಭಾಷ್ಪಾಂಜಲಿಯ ನನ್ನ ನುಡಿ

Creative Writings