Karada Vishwa

Article · March 17, 2026

" ನವಯುಗಾದಿ "

✍️ ಶೈಲಜ ಭಟ್, ಕನಿಯಾಲ

ಶಿಶಿರದ ನಡುಗುವ ಚಳಿಯನು ಸರಿಸಿ
ಚೈತ್ರಕೆ  ಹಸುರಿನ ಹೊನಲನು ಮೂಡಿಸಿ 
ವಸುಂಧರೆಯು ಕಾದಿಹಳು ವಸಂತನಿಗಾಗಿ
ಹಸಿರಿನ ಸಿರಿಗೆ ಫಲ ಪುಷ್ಪವ ಪೋಣಿಸಿ ... 

ಕಾಲ ಚಕ್ರವದು ನಿಲ್ಲದೆ ತಿರುಗಿ
ಯುಗವೊಂದು ಕಳೆದಿದೆ ಮೆಲ್ಲನೆ ಉರುಳಿ
ಕಂಪನು ಸೂಸುತ ಹೊಂಗೆಯು ಅರಳಿ
ಮತ್ತೆ ಬಂದಿದೆ ನವಯುಗಾದಿ ಮರಳಿ ...

ಸುಖ - ದುಃಖವನು ಜೊತೆಯಲಿ ಬೆರೆಸಿ
ಹೊತ್ತು ತಂದಿರುವ ಬೇವುಬೆಲ್ಲವ ಕಲಸಿ
ಹಂಚುತ ತಿನ್ನಿರಿ ನೋವನು ಮರೆಸಿ
ಸಂಭ್ರಮದಿಂದ ಹೊಸಬಟ್ಟೆಯ ಧರಿಸಿ ...

ಬೇವು ಬೆಲ್ಲದ ಸವಿಯನು ಉಂಡು
ಅದರಲಿ ಬದುಕಿನ ಸತ್ಯವ ಕಂಡು
ಚಿಗುರಿದ ಮನಸಲಿ ಕನಸನು ಬೆಳೆಸಿ
ಹೊಸ ವರುಷವನಿಂದು ಆಚರಿಸಿ ...



Creative Writings
" ನವಯುಗಾದಿ "