
Article · August 24, 2026
ಅಪ್ಪಾ ಎನ್ನುವ ತ್ಯಾಗಿ.
By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ:
ಜಯಶ್ರೀ ಐಲುಕುಂಜೆ
ಅಪ್ಪಾ ಎಂದರೆ ಸುಮ್ಮನೆ ಅಲ್ಲಾ,
ಗಂಧದ ಮರದಾ ಹಾಗೆ/
ತೇದು ತೇದು ಬರಿ ಚಮ೯ವೆ ಉಳಿವುದು,
ಗಂಧದ ಕೊರಡಿನ ಹಾಗೆ
ಸಿರಿಗಂಧದ ಕೊರಡಿನ ಹಾಗೆ /
ಹೆಗಲ ಮೇಲೆ ಸಂಸಾರ ಭಾರವನು
ಹೊತ್ತು ತಿರುಗುವನು ನಿತ್ಯ /
ಎಲ್ಲರ ಭಾರವ ಹೊತ್ತಿಹ
ಅಪ್ಪಗೆ ಸಿಗದದು ಹೊಗಳಿಕೆ ಸತ್ಯ /
ಮಕ್ಕಳ ಪ್ರೀತಿ ಅಮ್ಮನ ಮೇಲೆ
ಅಪ್ಪನಿಗಿಲ್ಲದ ಭಾಗ್ಯ /
ಅಪ್ಪನ ಹೊಣೆಯು ಕಡಿಮೆಯದೇನು?
ಅಪ್ಪನೂ ಪ್ರೀತಿಗೆ ಯೋಗ್ಯ /
ಒಂಭತ್ತು ತಿಂಗಳು ಹೊತ್ತವಳೆಂದೂ
ಹೆಚ್ಚಿತು ಅಮ್ಮನ ಮೌಲ್ಯ /
ಮೌನವಾಗಿಯೇ ಸಹಿಸುವನೆಲ್ಲವ,
ಇದು ಅಪ್ಪನ ದೌರ್ಬಲ್ಯ /
ಯಾಕೋ ಏನೋ ತಿಳಿಯದು ನನಗೇ
ಅಮ್ಮನೆ ಸರತಿಗೆ ಮುಂದೆ /
ಯಾರೂ ಪ್ರೀತಿಯ ತೋರಿಸದಿರಲೂ
ಅಪ್ಪನು ಉಳಿದನು ಹಿಂದೇ /
ಹೇಳುವರೆಲ್ಲರು ಸಹನೆಗೆ, ತಾಳ್ಮೆಗೆ
ಅಮ್ಮನು ಎಂದಿಗು ಮುಂದೆ/
ಅಪ್ಪನೂ ಎಂದಿಗು ಕಡಿಮೆಯೆ ಅಲ್ಲಾ
ಒಲವಿಗೆ, ತ್ಯಾಗಕೆ ಮುಂದೆ /
Creative Writings
