
News · August 11, 2025
ಕುರುಮುಜ್ಜಿ ದಿ.ಈಶ್ವರ ಭಟ್ 75 ವರ್ಷಗಳ ಹಿಂದೆ ರಚಿಸಿದ ಕವನ ಸಂಕಲನ 'ಕೆಂದಾವರೆ' ಬಿಡುಗಡೆ .
ಈಶ್ವರ ಭಟ್ಟರ ಮರಣಾನಂತರ ವರ್ಷಾಂತಿಕ ಕಾರ್ಯಕ್ರಮದ ಅಂಗವಾಗಿ ಮಗ ರಾಜಗೋಪಾಲ ಕುರುಮುಜ್ಜಿ ಮತ್ತು ಕುಟುಂಬದವರ ನೇತೃತ್ವದಲ್ಲಿ ಕುರುಮುಜ್ಜಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಬಿಡುಗಡೆ .
ದಿವಂಗತ ಕುರುಮುಜ್ಜಿ ಈಶ್ವರ ಭಟ್ ಅವರ ಯೌವನಕಾಲದಲ್ಲಿ ರಚಿಸಲಾದ 'ಕೆಂದಾವರೆ' ಕವನ ಸಂಕಲನವನ್ನು, ಅವರ ಮರಣಾನಂತರ ವರ್ಷಾಂತಿಕ ಕಾರ್ಯಕ್ರಮದ ಅಂಗವಾಗಿ ಮಗ ರಾಜಗೋಪಾಲ ಕುರುಮುಜ್ಜಿ ಮತ್ತು ಕುಟುಂಬದವರ ನೇತೃತ್ವದಲ್ಲಿ ಕುರುಮುಜ್ಜಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಡಾ. ಡಿ. ಸದಾಶಿವ ಭಟ್ಟ ಪಳ್ಳು ನಿಡ್ಪಳ್ಳಿ , ಈಶ್ವರ ಭಟ್ಟರ ಬುದ್ಧಿಶಕ್ತಿ ಮತ್ತು ಕಾವ್ಯಪ್ರತಿಭೆಯನ್ನು ಮೆಚ್ಚಿ, ಅವರು ತಮ್ಮ ಸಂತೋಷಕ್ಕಾಗಿ ಕಾವ್ಯ ಬರೆದಿದ್ದರೂ ಅದರ ಅರ್ಥ ವಿಶಿಷ್ಟವಾಗಿದೆ ಎಂದರು. ಹಿರಿಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ಟರು, ಅವರ ಮಾತುಗಳಲ್ಲಿ ಅಧ್ಯಯನದ ಚಿಂತನೆ ಸ್ಪಷ್ಟವಾಗುತ್ತಿತ್ತೆಂದು ಮತ್ತು ಹಾಸ್ಯ-ವಿನೋದಮಯ ಕವಿಯಾಗಿದ್ದರು ಎಂಬುದು ತಡವಾಗಿ ತಿಳಿದುಬಂದಿತ್ತೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೋಟೆ ರಾಮ ಭಟ್, ಪುಂಡೂರು ಪುರುಷೋತ್ತಮ ಪುಣಿಂಚತ್ತಾಯ, ರಾಜಾರಾಮ ಪೆರ್ಲ, ಚಂದ್ರಶೇಖರ ಏತಡ್ಕ ಮೊದಲಾದವರು ಭಾಗವಹಿಸಿದರು.






