
Article · May 13, 2026
ಅಮ್ಮ
✍️ಚಂದ್ರಹಾಸ ಕನ್ನಡ್ಕ
ಅಮ್ಮ ಸುಕೋಮಲ
ದಿನ ದಿನ ಅರಳುವ ಮಲ್ಲಿಗೆಯಂತೆ
ನಿರ್ಮಲ ಸುಂದರ ಸುಮಧುರ
ಅಮ್ಮ ಮೃದು ಬೆಣ್ಣೆಯಂತೆ
ಬಿಡದ ನಂಟು ಆ ಅಂಟು
ಅಮ್ಮ ನೊರೆ ಹಾಲಿನಂತೆ
ಸಂಸಾರದ ಹುಳಿಯಿಂದ
ಮೊಸರು ಬೆಣ್ಣೆ ತುಪ್ಪ ಪಡೆದು
ಮಗುವ ಪೋಷಿಸುವ ದೇವತೆ
ಅಮ್ಮ ಬೆರಳು ಹಿಡಿದು
ನಡೆದಾಡಿಸೊ
ಸಂಚಾರದ ಸಾರಥಿ
ತೊದಲು ನುಡಿಗೆ
ನಗೆಯಾಡುತ
ಮಾತು ಕಲಿಸೋ ವಾಗ್ದೇವಿ
ಕಂಕುಳಲ್ಲಿ ಕೂರಿಸಿ
ದಿಗಂತವನೆ ತೋರಿಸಿ
ಹಠವ ಮರೆಸೊ ಮಾದರಿ
ಕೃಷ್ಣನೆಂದೊ ರಾಧೆ ಎಂದೊ
ದಷ್ಟಪುಷ್ಟವಾಗಲೆಂದೊ
ಸುಂದರಾಂಗ ಸುಂದರಿಯೊ
ದೃಷ್ಟಿ ಬೊಟ್ಟು ರಕ್ಷೆಯೋ
ಕಂದನೇ ಐಸಿರಿ
ಲೋಕ ಮರೆಸೊ ಅಚ್ಚರಿ
ಅಮ್ಮನದ್ದೆ ಮಾದರಿ
ಜಗವನೆಲ್ಲ ಮರೆಯಿರಿ
ಅಮ್ಮನನ್ನು ನೆನೆಯಿರಿ
ಅವಳಿಲ್ಲದೆ ನಾವಿಲ್ಲ
ಜಗ ಅವಳದೆ ಸ್ಮರಿಸಿರಿ
✍️ಚಂಕ ೧೦/೦೫/೨೦೨೬
Creative Writings
