
Article · August 25, 2026
ವಿದ್ಯಾರ್ಥಿನಿಯರಿಗೆ "ಕೋಪ" ಕಂಪ್ಯೂಟರ್ ಕಲಿಕೆಗೆ ದಾರಿ...
By ಪ್ರವೀಣ ಪೊಸವಳ್ಯ ಬೆಲ್ಲ
ಪ್ರವೀಣ ಪೊಸವಳ್ಯ, ಬೆಲ್ಲ
"ಕೋಪ" ಎಂದರೇನು ? ಮತ್ತು ಮಾಹಿತಿ.... COPA.. (Computer Operator Programme Assistant.)..
ಎಸ್.ಎಸ್.ಯಲ್.ಸಿ ನಂತರ ಪಿ.ಯು.ಸಿ.,ಪದವಿ ಸ್ನಾತಕೋತ್ತರ ಪದವಿ ಹೀಗೆ ಹಲವಾರು ಜನರಲ್ ಕೋರ್ಸ್ ಗಳು, ಎಜುಕೇಶನ್ ಕೋರ್ಸ್ ಗಳಿವೆ. ಪಿ.ಯು.ಸಿ.ನಂತರ ಉದ್ಯೋಗಕ್ಕಾಗಿ ವಿದ್ಯಾರ್ಥಿನಿಯರಿಗೆ ಉದ್ಯೋಗ ಮತ್ತು ತರಬೇತಿ ಇಲಾಖೆಯ ಅಡಿಯಲ್ಲಿ ಬರುವ ಕೈಗಾರಿಕಾ ತರಬೇತಿ ಸಂಸ್ಥೆಗಳು ಸ್ಥಾಪನೆಯಾದವು. ಕಂಪ್ಯೂಟರ್ ಕಲಿಕೆಗೆ ಒಂದು ವರ್ಷದ ಐ.ಟಿ.ಐ. ಕಂಪ್ಯೂಟರ್ ಆಪರೇಟರ್ ಪ್ರೋಗ್ರಾಂ ಅಸಿಸ್ಟೆಂಟ್ (ಕೋಪಾ) ಕೋರ್ಸ್ ಇದೆ. ಇದು ಒಂದು ವರ್ಷದ ಅವಧಿಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಬೇಕಾದ ಥಿಯರಿ ಮತ್ತು ಪ್ರಾಯೋಗಿಕ ತರಬೇತಿಗಳನ್ನು ನೀಡುತ್ತದೆ. ಕರ್ನಾಟಕ ರಾಜ್ಯದ ಸರ್ಕಾರಿ ಐ.ಟಿ.ಐ.ಕಾಲೇಜುಗಳಲ್ಲಿ ಈ ಕೋರ್ಸ್ ಗಳು ಮಹಿಳಾ ಕೈಗಾರಿಕಾ ತರಬೇತಿ ಕೇಂದ್ರದಡಿಯಲ್ಲಿ ಮೀಸಲಾಗಿರುತ್ತದೆ. ಕನಿಷ್ಠ ಹತ್ತನೇ ತರಗತಿ ಉತ್ತೀರ್ಣರಾದವರು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
'ಕೋಪ' ಕೋರ್ಸ್ ನಲ್ಲಿ ಏನೇನಿದೆ ?
ಸಿಸ್ಟಮ್ ಸಾಫ್ಟ್ ವೇರ್, ಆಫೀಸ್ ಅಟೋಮೇಶನ್, ಗ್ರಾಫಿಕ್ ಡಿಸೈನಿಂಗ್, ವೆಬ್ ಡಿಸೈನಿಂಗ್, ಪ್ರೊಗ್ರಾಮಿಂಗ್ ಗಳನ್ನು ಮತ್ತು ಅಕೌಂಟಿಂಗ್ ಸಾಫ್ಟ್ ವೇರ್ ಗಳನ್ನು ಪ್ರಾಯೋಗಿಕವಾಗಿ ಕಲಿಸುತ್ತಾರೆ.
ಪ್ರಮಾಣ ಪತ್ರ : ಅರ್ಹ ಅಭ್ಯರ್ಥಿ ಗಳಿಗೆ ಅಖಿಲ ಭಾರತ ಮಟ್ಟದ ವೃತ್ತಿ ಪರೀಕ್ಷೆಗಳಿಗೆ ಅಂತಿಮೆ ವರ್ಷದಲ್ಲಿ ಹಾಜರಾಗಿ, ಪ್ರಾಯೋಗಿಕ ಪರೀಕ್ಷೆ, ಮೌಖಿಕ ಪರೀಕ್ಷೆ ನಡೆಯುತ್ತದೆ. ಉತ್ತೀರ್ಣದ ನಂತರ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ಪ್ರಮಾಣ ಪತ್ರ ಮತ್ತು ಕೇಂದ್ರ ಸರ್ಕಾರದ ಯನ್.ಸಿ.ವಿ.ಟಿ. ಯಿಂದ ಪ್ರಮಾಣ ಪತ್ರ ನೀಡುತ್ತಾರೆ. ಸರ್ಕಾರಿ ಐ.ಟಿ.ಐ. ಗಳಲ್ಲಿ ಅತಿ ಕಡಿಮೆ ಶುಲ್ಕದಲ್ಲಿ ಅಧ್ಯಯನ ಮಾಡಬಹುದಾಗಿದೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸರ್ಕಾರಿ ಮಹಿಳಾ ಐ.ಟಿ.ಐ ಗಳಿದ್ದು ಶೈಕ್ಷಣಿಕ ವರ್ಷದ ಜೂನ್ ತಿಂಗಳಲ್ಲಿ ಪ್ರವೇಶಾತಿ ಇರುತ್ತದೆ.
ದ.ಕ. ಜಿಲ್ಲೆಯ ಮಹಿಳಾ ಕೈಗಾರಿಕಾ ತರಬೇತಿ ಕೇಂದ್ರಗಳು
- ಮಹಿಳಾ ಐ.ಟಿ.ಐ ಕದ್ರಿ ಮಂಗಳೂರು
- ಮಹಿಳಾ ಐ.ಟಿ.ಐ.ನರಿಮೊಗರು ಪುತ್ತೂರು ತಾಲೂಕು.
ಈ ಕೋರ್ಸ್ ಗಳಿಗೆ ಸಾಮಾನ್ಯ ಸರ್ಕಾರಿ ಐ.ಟಿ.ಐ.ಹಾಗೂ ಅನುದಾನಿತ,ಅನುದಾನ ರಹಿತ ಐ.ಟಿ.ಐ ಗಳಲ್ಲಿಯೂ ಪ್ರವೇಶಾತಿ ಪಡೆಯಬಹುದಾಗಿದೆ.
ಉದ್ಯೋಗದ ಅವಕಾಶಗಳು:
ಕಂಪ್ಯೂಟರ್ ಆಪರೇಟರ್,ಆಧಾರ್ ಕೇಂದ್ರಗಳಲ್ಲಿ,ಜನಸೇವಾ ಕೇಂದ್ರಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ,ಪಂಚಾಯತ್ ಗಳಲ್ಲಿ ಹಾಗೂ ಕೆ.ಯಸ್.ಆರ್.ಟಿ.ಸಿ.ಯಲ್ಲಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಳಿಗೂ ಅವಕಾಶವಿದೆ.ಅದೇ ರೀತಿ ಕರ್ನಾಟಕ ಒನ್, ಗ್ರಾಮ್ ಒನ್,ಗ್ರಾಹಕ ಸೇವಾಕೇಂದ್ರಗಳನ್ನು ಸರ್ಕಾರದ ಮಾನ್ಯತೆ ಪಡೆದು ಸ್ವಂತ ಉದ್ಯಮವನ್ನು ಮಾಡಬಹುದಾಗಿದೆ.
ಡಿಪ್ಲೋಮಾಗೂ ಅವಕಾಶವಿದೆ:
ಕೋಪಾ ಕೋರ್ಸ್ ಅಧ್ಯಯನದ ನಂತರ ಉನ್ನತ ಶಿಕ್ಷಣವನ್ನು, ಕಂಪ್ಯೂಟರ್ ಸಯನ್ಸ್ ಡಿಪ್ಲೋಮಾ ಇಂಜಿನಿಯರಿಂಗ್ ಅನ್ನು ಪಾಲಿಟೆಕ್ನಿಕ್ ಕಾಲೇಜುಗಳ ಮೂಲಕ ಮಾಡಬಹುದು.ಅದೇ ರೀತಿ ಹಗಲು ಪಾಳಿಯಲ್ಲಿ ಉದ್ಯೋಗ ಮಾಡಿ ಸಂಧ್ಯಾ ಕಾಲೇಜಿನಲ್ಲಿ ಅಧ್ಯಯನಕ್ಕೆ ಅವಕಾಶವೂ ಇದೆ.
-ಪ್ರವೀಣ ಪೊಸವಳ್ಯ ಬೆಲ್ಲ.
9449448912


