
Article · May 28, 2026
ಮುಕ್ತಕಗಳು
✍🏻 ಸಂಧ್ಯಾ ಕೊರೆಕ್ಕಾನ
೧ .
ಬಡಿದಿರುವ ಕದವೆಲ್ಲ ತೆರೆಯುವುದು ಉಂಟೇನು
ಹಡೆದೆಲ್ಲ ಮಕ್ಕಳೂ ಬಳಿಸೇರಿಸುವರೆ
ದುಡಿದಿರುವ ಹಣವೆಲ್ಲ ನಮಗೊದಗಿ ಬರದಿರಲು
ದುಡಿತ ಬೇಡೆನಬೇಡ ಬಾಳಸಂಧ್ಯೆ
೨ .
ದಾರಿಬದಿ ಬೆಳೆದಿರುವ ಮರಗಿಡಗಳನು ನೋಡು
ನೀರುಣಿಸದವನಿಗೂ ನೆರಳ ನೀಡುವುದು
ಊರೊಳಗೆ ಹಲವರಿಗೆ ನೆರವನಿತ್ತಹನೆಂದು
ಸಾರಿಹೇಳದುಯೆಂದು ಬಾಳಸಂಧ್ಯೆ
೩ .
ಸಿಕ್ಕುಗಳ ಬಿಡಿಸುತಲಿ ಹೆಣೆದಾಗ ಜಡೆಯೊಂದು
ಚೊಕ್ಕವಾಗಿಯೆ ಕಂಡು ಅಂದಹೆಚ್ಚುವುದು
ಹೊಕ್ಕಿರುವ ಸಂಶಯವ ದೂರಮಾಡುತ ಬೆಳೆಸು
ಸಕ್ಕರೆಯ ಸಂಬಂಧ ಬಾಳಸಂಧ್ಯೆ
Creative Writings
