Karada Vishwa

News · November 1, 2026

ಎಂ.ಫಾರ್ಮ್ ನಲ್ಲಿ ಚಿನ್ನದ ಪದಕ - ವಿಶಾಖಾ ಭಟ್

ಕರಾಡ ವಿಶ್ವದ ಅಭಿನಂದನೆಗಳು

ಎಂ.ಫಾರ್ಮ್ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಗಳಿಸುವುದರೊಂದಿಗೆ ಚಿನ್ನದ ಪದಕವನ್ನು ಪಡೆದು ಅತ್ಯುತ್ತಮ ಸಾಧನೆಗೈದ ಕರಾಡ ಸಮಾಜದ ಪ್ರತಿಭೆ ಹಾರ್ನಾಡು ವಿಶಾಖಾ ಭಟ್ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಹಾರ್ನಾಡು ವಿಶಾಖಾ ಭಟ್ ಅವರು ನಿವೃತ್ತ ಅಧ್ಯಾಪಕರೂ, ಬೇಕಲ ಕೋಟೆ ಹನುಮಾನ್ ದೇವಸ್ಥಾನದ ಟ್ರಸ್ಟಿಯೂ ಆಗಿರುವ ಹಾರ್ನಾಡು ಮಂಜುನಾಥ ಭಟ್ ಹಾಗೂ ಅಧ್ಯಾಪಿಕೆ ಶಾಲಿನಿ ಕನ್ನಡಗುಳಿ ದಂಪತಿಯ ಸುಪುತ್ರಿ.

ಇವರು ಪ್ರಾಥಮಿಕ ಶಿಕ್ಷಣವನ್ನು ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ, ಪ್ರೌಢಶಿಕ್ಷಣ ಹಾಗೂ ಪಿಯುಸಿ ಶಿಕ್ಷಣವನ್ನು ಕೇಂದ್ರೀಯ ವಿದ್ಯಾಲಯ, ವಿದ್ಯಾನಗರದಲ್ಲಿ ಪೂರೈಸಿದರು. ಬಳಿಕ ಆಚಾರ್ಯ ರೆಡ್ಡಿ ಕಾಲೇಜಿನಲ್ಲಿ ಬಿ.ಫಾರ್ಮ್ ಪದವಿಯನ್ನು ಉತ್ತಮ ಅಂಕಗಳೊಂದಿಗೆ ಪೂರ್ಣಗೊಳಿಸಿ, ದಯಾನಂದ ಸಾಗರ್ ವಿಶ್ವವಿದ್ಯಾಲಯದಲ್ಲಿ ಎಂ.ಫಾರ್ಮ್ ಪದವಿಯನ್ನು ಪಡೆದುಕೊಂಡರು. ಎಂ.ಫಾರ್ಮ್‌ನಲ್ಲಿ ಪ್ರಥಮ ರ‍್ಯಾಂಕ್ ಗಳಿಸುವುದರೊಂದಿಗೆ ಚಿನ್ನದ ಪದಕವನ್ನೂ ತಮ್ಮದಾಗಿಸಿಕೊಂಡಿರುವುದು ಇವರ ಶೈಕ್ಷಣಿಕ ಸಾಧನೆಗೆ ಸಾಕ್ಷಿಯಾಗಿದೆ. ಇವರು ಪ್ರಸ್ತುತ ಸಿಂಜೀನ್ ಕಂಪನಿಯಲ್ಲಿ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ಅಕ್ಕ ಅಮೃತ ಭಟ್ ಅವರು ಬಿ.ಡಿ.ಎಸ್. ಹಾಗೂ ಎಂ.ಡಿ.ಎಸ್. ಪದವಿಗಳಲ್ಲಿ ರ‍್ಯಾಂಕ್ ಗಳಿಸಿ, ಪ್ರಸ್ತುತ ಪುಣೆಯ ಡಿ.ವೈ. ಪಾಟೀಲ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಭಾವ ಸಜ್ಜನ್ ಆಚಾರ್ಯ ಅವರು ಫಿಲಿಪ್ಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದು ಚಿನ್ನದ ಪದಕದ ಗೌರವಕ್ಕೆ ಪಾತ್ರರಾಗಿರುವ ವಿಶಾಖಾ ಭಟ್ ಅವರ ಸಾಧನೆ ನಿಜಕ್ಕೂ ಅಭಿನಂದನಾರ್ಹ. ಇವರಿಗೆ ಕರಾಡ ವಿಶ್ವದ ವತಿಯಿಂದ ಅಭಿನಂದನೆಗಳು

AchieversEducationWomen