
Article · October 28, 2026
ಭೂಮಿ 'ತಾಯಿ'
By ಪಲ್ಲವಿ.ಪ್ರಶಾಂತ. ಕಾನೇಟ್ಕರ್.
ಪಲ್ಲವಿ ಪ್ರಶಾಂತ್ ಕಾನೇಟ್ಕರ್
ಹೊತ್ತ ತಾಯಿಯ ಮೇಲಿನ ದೌರ್ಜನ್ಯದಿಂದ ಮನನೊಂದಾಗ ಮೂಡಿದ ಪುಟ್ಟ ಕವಿತೆ...
ಬಗೆದಿಹರು ಭುವಿಯೊಡಲ
ಗಣಿಯೆಂಬ ಹೆಸರಿಂದ
ತಾಯ ಒಡಲಿಗೆ ಇರಿತ ಮಕ್ಕಳಿಂದ
ಸಹಿಸುವಳು ಎಷ್ಟೆಂದು?
ಆ ತಾಯಿ ಈ ಗೋಳ
ಒಮ್ಮೆ ಮುನಿದರೆ ಆಕೆ ನಷ್ಟ ಬಹಳ
ಭೂಮಿ ಹುಣ್ಣಿಮೆಯಂದು
ಭೂತಾಯ ಸೀಮಂತ
ಇಂದಾದರೊಂದುದಿನ
ಅವಳ ಮಡಿಲು ಶಾಂತ
ಬಗೆಯದಿರಿ ತಾಯೊಡಲ
ಬೇಡುವೆನು ಕೈ ಮುಗಿದು
ಕ್ಷಮಿಸಿಬಿಡುವಳು ತಾಯಿ
ನಡೆಸುವಳು ಕೈ ಹಿಡಿದು
Creative Writings
