
Article · November 15, 2026
ವಿಪರ್ಯಾಸ
By ಶ್ರೀವಿದ್ಯಾ ಎಸ್ ಗೋಖಲೆ
ಶ್ರೀವಿದ್ಯಾ ಎಸ್
ನ್ಯಾನೋ ಕಥೆ
ಕಂಟೆಂಟ್ ಕ್ರಿಯೇಟರ್ ದಂಪತಿಗಳಿಬ್ಬರು ಸಾಮಾಜಿಕ ಜಾಲತಾಣದಲ್ಲಿ ತಾವು “ತಂದೆ ತಾಯಿಗಳಾಗುತ್ತಿದ್ದೇವೆ”ಎಂಬ ಶುಭ ಸುದ್ದಿಯನ್ನು ತಮ್ಮ ಸಾವಿರಗಟ್ಟಲೆ ಹಿಂಬಾಲಕ (ಫಾಲೋವರ್ಸ್) ರೊಂದಿಗೆ ಅಂದು ಹಂಚಿಕೊಂಡಿದ್ದು ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿತ್ತು.. ಇಂತಹ ಜಾಲತಾಣಗಳ ಗಂಧ ಗಾಳಿ ಗೊತ್ತಿಲ್ಲದ,
ಅದೇ ಮನೆಯಲ್ಲಿ ಜೊತೆಗೇ ವಾಸಿಸುತ್ತಿದ್ದ ಆತನ ಮುಗ್ಧೆ ತಾಯಿಗೆ ತಾನು ಅಜ್ಜಿಯಾಗುತ್ತಿದ್ದೇನೆ ಎಂಬ ವಿಷಯವೇ ಗೊತ್ತಿರಲಿಲ್ಲ.
Creative Writings
