Karada Vishwa

Article · August 21, 2026

ಆರ್.ಟಿ.ಓ ಆಗೋಕೆ ಏನೆಲ್ಲಾ ಅಧ್ಯಯನ ಮಾಡ್ಬೇಕು..

By ಪ್ರವೀಣ,ಪೊಸವಳ್ಯ ಬೆಲ್ಲ

ಪ್ರವೀಣ.ಪಿ.ಬಿ

ಮೊಟಾರು ವಾಹನ ನಿರೀಕ್ಷಕ ಹುದ್ದೆಗಾಗಿ ಬೇಕಾದ ವಿದ್ಯಾರ್ಹತೆ ಇತರ ಕೌಶಲ್ಯಗಳ ಮಾಹಿತಿ....

ಮಕ್ಕಳಿಗೆ ವಾಹನ ಚಲಾಯಿಸುವ ಕುತೂಹಲ,ನಂತರ ನಿಧಾನಕ್ಕೆ ವಾಹನ ಬೈಕ್ , ಕಾರ್,ಜೀಪ್ ಡ್ರೈವ್ ಹೀಗೆ ವಾಹನಗಳ ಚಾಲನೆಯಲ್ಲಿ ಆಸಕ್ತಿ ಇದ್ದೇ ಇರುತ್ತದೆ. ರಸ್ತೆಯಲ್ಲಿ ವಾಹನ ಚಲಾಯಿಸಲು ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯ ಮೂಲಕ (ಅನುಜ್ಞಾಪತ್ರ) ಲೈಸನ್ಸ್ ಪಡೆಯಬೇಕಾಗುತ್ತದೆ.ಈ ಲೈಸನ್ಸ್ ಪಡೆಯಲು ಕಲಿಕಾ ಲೈಸನ್ಸ್ (ಲರ್ನರ್ಸ್ ಲರ್ನಿಂಗ್ ಲೈಸನ್ಸ್) ಸಾರಿಗೆ ಇಲಾಖೆಯಿಂದ ಮೋಟಾರು ವಾಹನ ತರಬೇತಿ ಶಾಲೆಯ ಮೂಲಕ ಪಡೆದು ,ಒಂದು ತಿಂಗಳ ಅವಧಿಯಲ್ಲಿ ಡ್ರೈವಿಂಗ್ ಕಲಿತು ಮೋಟಾರು ವಾಹನ ನಿರೀಕ್ಷಕರ ಮುಂದೆ ವಾಹನ ಚಾಲನೆ ಮಾಡಿ, ಅದರಲ್ಲಿ ಉತ್ತೀರ್ಣರಾದಲ್ಲಿ ಡ್ರೈವಿಂಗ್ ಲೈಸನ್ಸ್ ಒಂದು ತಿಂಗಳೊಳಗೆ ಸಿಗುತ್ತದೆ.ಈ ಎಲ್ಲಾ ಪ್ರಕ್ರಿಯೆಗಳು ಆರ್.ಟಿ.ಒ ಕಚೇರಿಯ ಮೂಲಕ ನಡೆಯುತ್ತವೆ.

ಆರ್.ಟಿ.ಒ : ರೀಜನಲ್ ಟ್ರಾನ್ಸ್ಪೋರ್ಟ್ ಆಫೀಸರ್,(ಪ್ರಾದೇಶಿಕ ಸಾರಿಗೆ ಅಧಿಕಾರಿ) ಈ ಹುದ್ದೆಯು ಪ್ರತಿಯೊಂದು ಸಾರಿಗೆ ಕಚೇರಿಯ ಮುಖ್ಯ ಹುದ್ದೆಯಾಗಿದ್ದು, ಇವರು ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಅಧಿಕಾರಿಯವರಿಗೆ ನಿರ್ದೇಶನ ಹಾಗೂ ಮಾರ್ಗದರ್ಶನ ನೀಡುತ್ತಾರೆ.

ಆರ್. ಟಿ. ಒ ಆಗಲು ಏನೇನು ಪ್ರಯತ್ನ ಬೇಕು? :
ಮೋಟಾರು ವಾಹನ ನಿರೀಕ್ಷಕರು: ಈ ಹುದ್ದೆಯು ಆರ್. ಟಿ.ಒ ಹುದ್ದೆಯ ಕೆಳ ಶ್ರೇಣಿಯಾಗಿದ್ದು, ಈ ಹುದ್ದೆಗೆ
ಸರ್ಕಾರಿ ಅಧಿಸೂಚನೆಯ ನಂತರ
ಕೆ.ಪಿ.ಯಸ್ಸಿ ಯು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಅಂಕಗಳ ಕಟ್ ಆಫ್ ಆಧಾರದಲ್ಲಿ ನೇಮಕಾತಿ ನ‍ಡೆಯುತ್ತದೆ.ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿತ ದೈಹಿಕ ಅರ್ಹತೆ ಬೇಕಾಗಿರುತ್ತದೆ.

ವಿದ್ಯಾರ್ಹತೆ ಯಾವುದು? :
ಹತ್ತನೇ ತರಗತಿ ನಂತರ ಪಿಯುಸಿ ವಿಜ್ಞಾನದ ನಂತರ, ಅಟೋಮೊಬೈಲ್ ಅಥವಾ ಮೆಕ್ಯಾನಿಕಲ್ ವಿಭಾಗದಲ್ಲಿ ಡಿಪ್ಲೊಮಾ ಇಂಜಿನಿಯರಿಂಗ್ ಅಥವಾ ,ಅಟೋಮೊಬೈಲ್ ಅಥವಾ ಮೆಕ್ಯಾನಿಕಲ್ ವಿಭಾಗದಲ್ಲಿ ಇಂಜಿನಿಯರಿಗ್ ಪದವಿ ಹೊಂದಿರಬೇಕು.ಜೊತೆಗೆ ವಾಹನ ಚಾಲನಾ ಪ್ರಮಾಣಪತ್ರ ಮತ್ತು ಚಾಲನೆ ತಿಳಿದಿರಬೇಕು

ಇತರ ತಯಾರಿಗಳು/ಕೌಶಲ್ಯಗಳು:
- ದ್ವಿಚಕ್ರ ,ಲಘುವಾಹನ,ಬ್ಯಾಡ್ಜ್, ಭಾರಿ ವಾಹನ ಪ್ರಯಾಣಿಕ ಮತ್ತು ಸರಕು ವಾಹನ ‍ಚಾಲನಾ ಪರವಾನಿಗೆಯನ್ನು ಕಾಲೇಜು ಶಿಕ್ಷಣ ಹಂತದಲ್ಲಿಯೇ ಮಾಡಿಸಿಕೊಳ್ಳುವುದು.
- ವಾಹನ ಚಾಲನೆಯಲ್ಲಿ ಉತ್ತಮ ಹಿಡಿತವನ್ನು ಇಟ್ಟುಕೊಳ್ಳುವುದು.
- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನ,ಗಣಕಯಂತ್ರ,ಮೆಕ್ಯಾನಿಲ್,ಅಟೋಮೊಬೈಲ್,ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್ ವಿಷಯಗಳ ಪ್ರಶ್ನೆಗಳಿಗೆ ತಯಾರಾಗುವುದು ಸ್ವ ಅಧ್ಯಯನ ಮಾಡುವುದು.
- ತಾಂತ್ರಿಕ ಡಿಪ್ಲೋಮಾ/ತಾಂತ್ರಿಕ ಪದವಿ ನಂತರ ಸರ್ಕಾರದ ಮಾನ್ಯತೆ ಪಡೆದ ಯಾವುದಾದರು ಒಂದು ಸಂಸ್ಥೆಯಲ್ಲಿ ಎರಡು ವರ್ಷ ವಾಹನಗಳ ಮೇಲ್ವಿಚಾರಣಾ/ಮ್ಯಾನೇಜರ್ ಅನುಭವ ಪ್ರಮಾಣ ಪತ್ರವಿದ್ದಲ್ಲಿ ಉತ್ತಮ.

ಅಂತಿಮವಾಗಿ ಆರ್.ಟಿ.ಒ ಹುದ್ದೆಗೆ ‍ದಾರಿ:
ಮೊಟಾರು ವಾಹನ ನಿರೀಕ್ಷರಾಗಿ ಆಯ್ಕೆಯಾಗಿ ಸೇವಾ ಅವಧಿಯ ಆಧಾರ, ಕೆ.ಎ.ಸ್. ಪರೀಕ್ಷೆಯಲ್ಲಿ ಉತ್ತಿರ್ಣರಾದಾಗ ಅಂದರೆ‍ ಪದೋನ್ನತಿಯ ಆಧಾರದಲ್ಲಿ ಈ ಹುದ್ದೆಯನ್ನು ನಿರೀಕ್ಷಿಸಬಹುದಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಮೆಕ್ಯಾನಿಕಲ್/ ಅಟೋಮೊಬೈಲ್ ಇಂಜಿನಿಯರ್ ಪದವೀಧರರು ಸರ್ಕಾರಿ ವಲಯದ ಈ ಉದ್ಯೋಗಕ್ಕೂ ಪ್ರಯತ್ನಿಸಬಹುದು

- ಪ್ರವೀಣ ಪೊಸವೊಳ್ಯ ಬೆಲ್ಲ.
(9449448912)

Creative WritingsEducation
ಆರ್.ಟಿ.ಓ ಆಗೋಕೆ ಏನೆಲ್ಲಾ ಅಧ್ಯಯನ ಮಾಡ್ಬೇಕು..