Karada Vishwa

Article · November 14, 2026

ಕೃಷ್ಣ

By ಗಾಯತ್ರಿ ಕೆ ನಾಗರಾಜ ಕೃಷ್ಣಗಾನಂ,

ಗಾಯತ್ರಿ ಕೆ ಅಡ್ಕತೊಟ್ಟಿ

ಏಳೆ ದ್ವಿಪದಿ ಯಲ್ಲಿ ಬರೆದಿರುವಂತಹ ಕೃಷ್ಣನ ಸ್ತುತಿ

ದೇವಕಿ ನಂದನ
ಗೋವಳಕೃಷ್ಣನು
ಪಾವನ ನಾಮ ಯದುಕುಲದಿ

ವಾರಿಜ ನಾಭನೆ
ತಾರಣ ವಾರಿಧಿ
ಸಾರಥಿ ದೇವ ಮನುಕುಲಕೆ

ಕಾಳಿಯ ಮದವನು
ಕಳಚಿದ ನರ್ತಿಸಿ
ಬಾಳಿಗೆ ಮೋಕ್ಷ ಕರುಣಿಸಿದ

ಪಾತಕಿ ಕಂಸನ
ಘಾತವ ಮಾಡಿಸಿ
ಜಾತಕ ಬಲವ ಅಳಿಸಿದನೆ

ಧರ್ಮವ ಕಾಯುವ
ಧರ್ಮಿಯ ರಕ್ಷಿಪ
ಕರ್ಮದಿ ನಡೆವ ನಿಷ್ಠೆಯಲಿ

ಮಾಧವ ಕೃಷ್ಣನ
ಯಾದವ ಕುಲಜನು
ಮಧುರಾ ಪುರಿಯ ಕಾಯ್ವವನು

ಭಕುತರ ಮನದಲಿ
ಮುಕುತಿಯ ನೀಡುವ
ಶ್ರೀಕರ ಹರಿಯು ಜಗದರಸ

Creative Writings