Karada Vishwa

News · October 28, 2026

ಕರಾಡ ಮಹಿಳಾ ವೇದಿಕೆ ಬೆಂಗಳೂರು ವತಿಯಿಂದ ನವರಾತ್ರಿ ಆನ್‌ಲೈನ್ ಉತ್ಸವ – 2026 ಯಶಸ್ವಿಯಾಗಿ ಸಂಪನ್ನ

ಅಕ್ಷತಾ ಭಟ್ ಕನಿಯಾಲ ಅವರ ನೇತೃತ್ವದಲ್ಲಿ ಮಹಿಳೆಯರು ಮತ್ತು ಮಕ್ಕಳ ಪ್ರತಿಭೆಗೆ ವೇದಿಕೆ; ಶೂನ್ಯ ಬಜೆಟ್‌ನಲ್ಲಿ ಆಯೋಜನೆ

ಮಾಹಿತಿ ಕೃಪೆ : ಅಕ್ಷತಾ ಭಟ್ ಕನಿಯಾಲ

ಕರಾಡ ಸಮುದಾಯದ ಒಗ್ಗಟ್ಟು, ಮಹಿಳಾ ಸಬಲೀಕರಣ, ಮಕ್ಕಳ ಪ್ರತಿಭಾ ವಿಕಸನ ಹಾಗೂ ಪ್ರೋತ್ಸಾಹದ ಉದ್ದೇಶದಿಂದ ಕರಾಡ ಮಹಿಳಾ ವೇದಿಕೆ ಬೆಂಗಳೂರು ವತಿಯಿಂದ ಆಯೋಜಿಸಲಾದ ನವರಾತ್ರಿ ಆನ್‌ಲೈನ್ ಉತ್ಸವ – 2026 ಯಶಸ್ವಿಯಾಗಿ ಸಂಪನ್ನಗೊಂಡಿತು. ಅಕ್ಷತಾ ಭಟ್ ಕನಿಯಾಲ ಅವರ ನೇತೃತ್ವದಲ್ಲಿ ನಡೆದ ಈ ಉತ್ಸವವು ವಿವಿಧ ಪ್ರದೇಶಗಳ ಕರಾಡ ಕುಟುಂಬಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಮಹಿಳೆಯರು ಮತ್ತು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಯಿತು.

ಒಂದು ವಾರದ ಕಾಲ ನಡೆದ ಉತ್ಸವದಲ್ಲಿ ಕಥೆ ಹೇಳುವ ಸ್ಪರ್ಧೆ, ಆಶುಭಾಷಣ (Pick and Speak), ಮಕ್ಕಳ ಹಾಗೂ ವಯಸ್ಕರ ರಸಪ್ರಶ್ನೆ, ಹರಿವಾಣ ಆರತಿ ತಟ್ಟೆ ರಂಗೋಲಿ, ಯುಗಳ ಗಾಯನ ಮತ್ತು ನವರಾತ್ರಿ ವಿಷಯದ ಕುಟುಂಬದ ಗುಂಪು ಛಾಯಾಚಿತ್ರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಎಲ್ಲಾ ಸ್ಪರ್ಧೆಗಳಲ್ಲಿ ಕನ್ನಡ ಅಥವಾ ಕರಾಡ ಭಾಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.

ಉತ್ಸವದ ಉದ್ಘಾಟನಾ ಸಮಾರಂಭ

ಉದ್ಘಾಟನಾ ಸಮಾರಂಭವು 2026ರ ಅಕ್ಟೋಬರ್ 11ರಂದು ಅಕ್ಷತಾ ಭಟ್ ಕನಿಯಾಲ ಅವರ ನಿವಾಸದಲ್ಲಿ ನಡೆಯಿತು. ನಿರೂಪಕಿ ಶ್ರದ್ಧಾ ಕನ್ನಡ್ಕ ಕಾರ್ಯಕ್ರಮವನ್ನು ಆರಂಭಿಸಿದರು. ಕರಾಡ ಮಹಿಳಾ ವೇದಿಕೆ ಬೆಂಗಳೂರಿನ ಸಂಸ್ಥಾಪಕಿ ಮಹಿತಾ ಭಟ್ ಕಡಂದೇಲು ಹಾಗೂ ಅಕ್ಷತಾ ಭಟ್ ಕನಿಯಾಲ ಉಪಸ್ಥಿತರಿದ್ದರು.

ಲಕ್ಷ್ಮಿ ಎಸ್. ಭಟ್ ಕನಿಯಾಲ ಅವರ ಪ್ರಾರ್ಥನಾ ಗೀತೆಯೊಂದಿಗೆ ದೀಪಪ್ರಜ್ವಲನೆ ನೆರವೇರಿತು. ಆನ್‌ಲೈನ್ ಮೂಲಕ ಭಾಗವಹಿಸಿದ ಡಾ. ಪ್ರಫುಲ್ಲ ಗಣಪತಿ ಭಟ್ ಕುಂಡೇಲು ಅವರು ಮಹಿಳೆಯರು ಕುಟುಂಬದ ಜವಾಬ್ದಾರಿಗಳ ಜೊತೆಗೆ ವೈಯಕ್ತಿಕ ಬೆಳವಣಿಗೆಗೂ ಆದ್ಯತೆ ನೀಡಬೇಕೆಂದು ಪ್ರೇರಣಾದಾಯಕವಾಗಿ ಮಾತನಾಡಿದರು. ಅರ್ಚನಾ ಎಸ್. ಎನ್. ಭಟ್ ಕುಂಟಿಕಾನ ಅವರು ನಾರಿಶಕ್ತಿ, ಸೌಂಡ್ ಥೆರಪಿ ಮತ್ತು ಸೌಂಡ್ ಬಾತ್‌ನ ಮಹತ್ವವನ್ನು ವಿವರಿಸಿ ಪ್ರಾತ್ಯಕ್ಷಿಕೆ ನೀಡಿದರು. ಬಳಿಕ ಲಲಿತಾ ಸಹಸ್ರನಾಮ ಪಾರಾಯಣ ನೆರವೇರಿತು.

ಸ್ಪರ್ಧೆಗಳ ಫಲಿತಾಂಶಗಳು

ವಿವಿಧ ಸ್ಪರ್ಧೆಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು, ವಿಜೇತರಿಗೆ ಬಹುಮಾನಗಳನ್ನು ಮುಂದಿನ ಕರಾಡ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.

1. ಕಥೆ ಹೇಳುವ ಸ್ಪರ್ಧೆ – 4ರಿಂದ 6 ವರ್ಷ

- ಪ್ರಥಮ: ಸ್ಕಂದ ಪಡ್ಪು

- ದ್ವಿತೀಯ: ರಘುರಾಮ್ ವಿ. ಭಟ್

- ತೃತೀಯ: ಸಮನ್ವಿ ಸಪ್ರೆ

- ಸಮಾಧಾನಕರ ಬಹುಮಾನ: ಅವಿರಯ್ ಭಟ್ ಮತ್ತು ವಿಶ್ರುತ್ ಭಟ್ ಅಲಂಗಾರು

2. ಕಥೆ ಹೇಳುವ ಸ್ಪರ್ಧೆ – 7ರಿಂದ 10 ವರ್ಷ

- ಪ್ರಥಮ: ಇಶಾನಿ ವಿ. ಸೈಪಂಗಲ್ಲು

- ದ್ವಿತೀಯ: ಆರ್ಯ ಎಸ್. ಭಟ್

- ತೃತೀಯ: ಚಿರಂತನ ಲಕ್ಷ್ಮಿ

- ಸಮಾಧಾನಕರ ಬಹುಮಾನ: ಅಥರ್ವ ಗುಂಪೆ

3. ಆಶುಭಾಷಣ ಸ್ಪರ್ಧೆ (Pick and Speak)

- ಪ್ರಥಮ: ಪೂರ್ಣಿಮಾ ಪಂಡಿತ್ ಮತ್ತು ಸೌಜನ್ಯ ಕಾರ್ಕಳ

- ದ್ವಿತೀಯ: ಮಧುರಾ ಕೆ.ಎಂ. ಮತ್ತು ಜ್ಯೋತ್ಸ್ನಾ ಕಡಂದೇಲು

- ತೃತೀಯ: ಮಹಿತಾ ಭಟ್

- ಸಮಾಧಾನಕರ ಬಹುಮಾನ: ಹರಿಣಿ ಪಾವನಸ್ಕರ್

4. ರಸಪ್ರಶ್ನೆ ಸ್ಪರ್ಧೆ – ಮಕ್ಕಳು

- ಪ್ರಥಮ: ಅಧ್ವಿಕ್ ಅಜಕ್ಕಳಮೂಲೆ

- ದ್ವಿತೀಯ: ಅಥರ್ವ್ ಜಿ. ಭಟ್

- ತೃತೀಯ: ಆರ್ಯ ಎಸ್. ಭಟ್

- ಸಮಾಧಾನಕರ ಬಹುಮಾನ: ಪ್ರದ್ಯೋತ್ ಭಟ್ ಆಕಿರೆಕಾಡು

5. ರಸಪ್ರಶ್ನೆ ಸ್ಪರ್ಧೆ – ವಯಸ್ಕರು

- ಪ್ರಥಮ: ಪೂರ್ಣಿಮಾ ಪಂಡಿತ್

- ದ್ವಿತೀಯ: ಮಮತಾ ಕೆ.ಎಂ.

- ತೃತೀಯ: ಸುಪ್ರಭಾ ಕಡಂದೇಲು

- ಸಮಾಧಾನಕರ ಬಹುಮಾನ: ಸ್ವಪ್ನಾ ಪ್ರವೀಣ್ ಮತ್ತು ಸಂಧ್ಯಾ ಕೊರೆಕ್ಕಾನ

6. ಹರಿವಾಣ ಆರತಿ ತಟ್ಟೆ ರಂಗೋಲಿ ಸ್ಪರ್ಧೆ

- ಪ್ರಥಮ: ಅಂಕಿತಾ ಭಟ್

- ದ್ವಿತೀಯ: ಮಹಿತಾ ಕಡಂದೇಲು

- ತೃತೀಯ: ಸಿಂಧೂರಾ ಗುಂಪೆ

- ಸಮಾಧಾನಕರ ಬಹುಮಾನ: ರಮ್ಯಾ ಭಟ್ ಕನಿಯಾಲ

- ವಿಶೇಷ ತೀರ್ಪುಗಾರರ ಪ್ರೋತ್ಸಾಹ ಬಹುಮಾನ: ವಿಹಾನ ಭಟ್ ಪಾದೂರು

7. ಯುಗಳ ಗಾಯನ – ಮಕ್ಕಳ ವಿಭಾಗ

- ಪ್ರಥಮ: ಆರ್ಯ ಎಸ್. ಭಟ್ ಮತ್ತು ಪ್ರೀತಿ ಎಸ್. ಭಟ್

- ದ್ವಿತೀಯ: ಸುಪ್ರಭಾ ಕಡಂದೇಲು ಮತ್ತು ಚಿರಂತನಾ ಕಡಂದೇಲು

- ತೃತೀಯ: ಅವ್ಯುಕ್ತ ಭಟ್ ಮತ್ತು ಅಕ್ಷತಾ ಭಟ್ ಕನಿಯಾಲ

- ಸಮಾಧಾನಕರ ಬಹುಮಾನ: ಅಥರ್ವ ಗುಂಪೆ ಮತ್ತು ಶ್ರುತಿ ಗುಂಪೆ

8. ಯುಗಳ ಗಾಯನ – ಹಿರಿಯರ ವಿಭಾಗ (12 ವರ್ಷ ಮತ್ತು ಮೇಲ್ಪಟ್ಟವರು)

- ಪ್ರಥಮ: ಶ್ರಾವ್ಯಾ ಪಂಡಿತ್, ಶ್ರೇಯಾ ಪಂಡಿತ್, ಸುಜಾತಾ ನಿಗಲೆ ಮತ್ತು ವಿಭಾ ನಿಗಲೆ

- ದ್ವಿತೀಯ: ಸಿಂಧೂರಾ ಗುಂಪೆ, ಸಹನಾ ಗುಂಪೆ, ಭುವಿ ಮತ್ತು ಪ್ರತಿಭಾ ಸಜಂಗದ್ದೆ

- ತೃತೀಯ: ಭಾರತಿ ಭಟ್, ಇಂಚರಾ ಭರಣೇಕರ್, ಶೈಲಾ ಕನ್ನಡಗುಳಿ ಮತ್ತು ಸಂಹಿತಾ ಕನ್ನಡಗುಳಿ

- ಸಮಾಧಾನಕರ ಬಹುಮಾನ: ಸವಿತಾ ದೈತೋಟ ಮತ್ತು ಶರಣ್ಯಾ ದೈತೋಟ

9. ಕುಟುಂಬದ ಗುಂಪು ಛಾಯಾಚಿತ್ರ ಸ್ಪರ್ಧೆ – ನವರಾತ್ರಿ ವಿಷಯ

- ಪ್ರಥಮ: ಡಾ. ಬರ್ಖಾ ಮಂಡೋಳಿ ಮತ್ತು ಕುಟುಂಬ

- ದ್ವಿತೀಯ: ಸುಜಾತಾ ಭಟ್ ದರ್‌ಖಾಸ್ತು ಮತ್ತು ಕುಟುಂಬ

- ತೃತೀಯ: ಲಕ್ಷ್ಮಿ ಭಟ್ ಕನಿಯಾಲ ಮತ್ತು ಕುಟುಂಬ

- ಸಮಾಧಾನಕರ ಬಹುಮಾನ: ಮನೋರಮಾ ಭಟ್ ಪಾದೂರು ಮತ್ತು ಕುಟುಂಬ

ಶೂನ್ಯ ಬಜೆಟ್‌ನಲ್ಲಿ ಬಹುಮಾನಗಳ ಆಯೋಜನೆ

ಈ ವರ್ಷದ ಉತ್ಸವದ ವಿಶೇಷವೆಂದರೆ, ಎಲ್ಲಾ ಚಟುವಟಿಕೆಗಳು ಮತ್ತು ಬಹುಮಾನಗಳನ್ನು ಶೂನ್ಯ ಬಜೆಟ್‌ನಲ್ಲಿ ಆಯೋಜಿಸಿರುವುದು. ಕರಾಡ ಸಮುದಾಯದ ಮಹಿಳೆಯರ ಉದಾರ ಕೊಡುಗೆ ಮತ್ತು ಸಹಕಾರದಿಂದ ಇದು ಸಾಧ್ಯವಾಯಿತು.

ಮ್ಯಾಕ್ರೇಮ್ ಉದ್ಯಮ ನಡೆಸುತ್ತಿರುವ ಸಂಧ್ಯಾ ರಾಣಿ ದೈತೋಟ ಅವರು ಮ್ಯಾಕ್ರೇಮ್ ಬ್ಯಾಗ್‌ಗಳನ್ನು ಹಾಗೂ ಶೀಲಾ ಪಡಿಕ್ಕಲ್ ಅವರು ಕೈಯಿಂದ ತಯಾರಿಸಿದ ಕ್ರೋಶೆ ಬ್ಯಾಗ್‌ಗಳನ್ನು ಪ್ರಾಯೋಜಿಸಿದ್ದಾರೆ. ಈ ಬ್ಯಾಗ್‌ಗಳನ್ನು ಬಹುಮಾನಗಳ ರೂಪದಲ್ಲಿ ನೀಡಲಾಗುವುದು.

ವಿಮಲಾ ಭಟ್ ತೈರೆ ಅವರು ಮಕ್ಕಳ ಬಹುಮಾನಗಳಿಗೆ ಕೊಡುಗೆ ನೀಡಿದ್ದಾರೆ. ಕಳೆದ ವರ್ಷಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚು ಜನರು ಭಾಗವಹಿಸಿರುವುದನ್ನು ಗಮನಿಸಿದ ಸುಜಾತಾ ದರ್‌ಖಾಸ್ತು ಅವರು ಭಾಗವಹಿಸಿದವರನ್ನು ಪ್ರೋತ್ಸಾಹಿಸಲು ಸಮಾಧಾನಕರ ಬಹುಮಾನಗಳನ್ನೂ ನೀಡುವ ಸಲಹೆ ನೀಡಿದರು. ಅದರಂತೆ, ಎಲ್ಲಾ ಸಮಾಧಾನಕರ ಬಹುಮಾನಗಳ ಪ್ರಾಯೋಜಕತ್ವವನ್ನೂ ಅವರೇ ವಹಿಸಿಕೊಂಡಿದ್ದಾರೆ.

ಯಶಸ್ಸಿನ ಹಿಂದೆ ಶ್ರಮಿಸಿದ ಎಲ್ಲರಿಗೂ ಅಕ್ಷತಾ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಕಾರ್ಯಕ್ರಮಕ್ಕೆ ಸಹಕರಿಸಿದ ಸಹ-ನಿರೂಪಕಿಯರಾದ ಸುಜಾತಾ, ಭುವಿ, ಶ್ರದ್ಧಾ, ಮಮತಾ, ಸ್ನೇಹಾ ಮತ್ತು ಗ್ರೀಷ್ಮಾ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ತಾಂತ್ರಿಕ ಸಹಕಾರ ನೀಡಿದ ಕೆ. ಎಸ್. ಭಟ್ ಹಾಗೂ ಕರಾಡ ವಿಶ್ವದ ತಂಡದ ನೆರವನ್ನು ಸ್ಮರಿಸಿದ್ದಾರೆ.

ತೀರ್ಪುಗಾರರಾದ ಶಾಲಿನಿ ಚಿಪ್ಳೂಣ್ಕರ್, ಸೌಮ್ಯಾ ಕಾರ್ಲೆ, ಅರ್ಚನಾ ಕುಂಟಿಕಾನ, ಅಂಜಲಿ ಅನಂತ್, ದೀಪಶ್ರೀ ಕಯಂಪಾಡಿ, ದೀಕ್ಷಾ ಕುದ್ಕುಳಿ, ನಳಿನಿ ಸೈಪಂಗಲ್ಲು ಮತ್ತು ಡಾ. ಪ್ರಫುಲ್ಲ ಭಟ್ ಅವರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಲಾಯಿತು. ಮನೆಯಿಂದಲೇ ಸೌಂದರ್ಯ ಲಹರಿ ಪಠಣದಲ್ಲಿ ಪಾಲ್ಗೊಂಡ ಸಂಧ್ಯಾ ಕೊರೆಕ್ಕಾನ, ಶಾಂತಲಾ ಪೊಸವಳ್ಯ, ಸುಧಾ ಮುಂಗಿಲ, ಆಶಾ ಉಪ್ಪಂಗಳ, ಸಂಧ್ಯಾ ಮುಂಡೋಳಿ ಮತ್ತು ಜ್ಯೋತ್ಸ್ನಾ ಕಡಂದೇಲು ಅವರನ್ನೂ ಕೃತಜ್ಞತೆಯಿಂದ ಸ್ಮರಿಸಲಾಯಿತು.

ಭಾಗವಹಿಸುವಿಕೆಯೇ ನಿಜವಾದ ಗೆಲುವು

ಬಹುಮಾನ ಗೆಲ್ಲುವುದಕ್ಕಿಂತ ಸ್ಪರ್ಧೆಯಲ್ಲಿ ಭಾಗವಹಿಸುವುದು, ಪ್ರತಿಭೆಯನ್ನು ಪ್ರದರ್ಶಿಸುವುದು ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯುವುದು ಮುಖ್ಯ ಎಂಬ ಸಂದೇಶವನ್ನು ಆಯೋಜಕಿ ಶ್ರೀಮತಿ ಅಕ್ಷತಾ ಸಾರಿದರು. ತೀರ್ಪುಗಾರರ ತೀರ್ಪನ್ನು ಗೌರವಿಸಿ ಸಕಾರಾತ್ಮಕ ಮನೋಭಾವದಿಂದ ಮುಂದುವರಿಯುವಂತೆ ಮಹಿಳಾ ವೇದಿಕೆ ವತಿಯಿಂದ ಎಲ್ಲರಿಗೂ ಮನವಿ ಮಾಡಿದ್ದಾರೆ.

ಕಳೆದ ವರ್ಷಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚು ಜನರು ಈ ಬಾರಿ ಭಾಗವಹಿಸಿರುವುದು ಉತ್ಸವದ ಯಶಸ್ಸಿಗೆ ಸಾಕ್ಷಿಯಾಗಿದೆ. ಆನ್‌ಲೈನ್ ಆಯೋಜನೆಯಿಂದ ವಿವಿಧ ಪ್ರದೇಶಗಳ ಕರಾಡ ಕುಟುಂಬಗಳು ಈ ವೇದಿಕೆಯಲ್ಲಿ ಭಾಗವಹಿಸಲು ಸಾಧ್ಯವಾಯಿತು.

ಮಹಿಳೆಯರ ಸ್ವಾವಲಂಬನೆ, ಮಕ್ಕಳ ಪ್ರತಿಭೆ, ಭಾಷಾಭಿಮಾನ ಮತ್ತು ಸಮುದಾಯದ ಒಗ್ಗಟ್ಟಿಗೆ ವೇದಿಕೆಯಾದ ಈ ಉತ್ಸವವು, ದೊಡ್ಡ ಕಾರ್ಯಕ್ರಮವನ್ನೂ ಶೂನ್ಯ ಬಜೆಟ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಬಹುದು ಎಂಬುದಕ್ಕೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಕರಾಡ ಕುಟುಂಬಗಳನ್ನು ಒಗ್ಗೂಡಿಸಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಕಲ್ಪವನ್ನು ಕರಾಡ ಮಹಿಳಾ ವೇದಿಕೆ ವ್ಯಕ್ತಪಡಿಸಿದೆ.


ಉದ್ಘಾಟನಾ ಸಮಾರಂಭ


ಆಶುಭಾಷಣ , ನವರಾತ್ರಿ ರಸಪ್ರಶ್ನೆ


ನವರಾತ್ರಿ ರಂಗೋಲಿ


ಹರಿವಾಣ ರಂಗೋಲಿ


ಕುಟುಂಬದೊಂದಿಗಿನ ಫೋಟೋ ಸ್ಪರ್ಧೆ

Community