Karada Vishwa

News · April 22, 2026

'ಕರುನಾಡ ಸ್ವಾದ ' ಸ್ಪರ್ಧೆಯಲ್ಲಿ ಗ್ರಾಂಡ್ ಫಿನಾಲೆಗೆ ಆಯ್ಕೆಯಾದ ಅಂಬಿಕಾ ಮಠದಮೂಲೆ

ಕರಾಡ ವಿಶ್ವದ ಅಭಿನಂದನೆಗಳು

'ಕರುನಾಡ ಸ್ವಾದ' ಎಂಬ ಅಡುಗೆ ಸ್ಪರ್ಧೆಯನ್ನು ವಿಜಯಕರ್ನಾಟಕ Freedom Oil ಹಾಗೂ Exo ಸಹಯೋಗದಲ್ಲಿ ಆಯೋಜಿಸಿತ್ತು. ಕರ್ನಾಟಕದಲ್ಲಿ ಮರೆತು ಹೋಗಿರುವ ಸಾಂಪ್ರದಾಯಿಕ ಖಾದ್ಯಗಳನ್ನು ಗುರುತಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. “ಕರುನಾಡ ಸ್ವಾದ – ಅಡುಗೆ ಕೋಚ್‌ಗಳ ಹುಡುಕಾಟ” ಎಂಬ ಹೆಸರಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ರಾಜ್ಯದ ಮೂಲೆಮೂಲೆಗಳಿಂದ ಸುಮಾರು 7000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಸುಮಾರು ಎರಡು ತಿಂಗಳುಗಳ ಕಾಲ ಪ್ರತಿಯೊಂದು ತಾಲೂಕು ಮಟ್ಟದಲ್ಲಿ ಸ್ಪರ್ಧೆಗಳು ನಡೆಯುತ್ತಾ ಬಂದಿದ್ದು, ಅದರಲ್ಲಿ ಒಟ್ಟು 200 ಸ್ಪರ್ಧಿಗಳನ್ನು ಸೆಮಿಫೈನಲ್ ಗೆ ಆಯ್ಕೆ ಮಾಡಲಾಯಿತು. ಇವುಗಳಲ್ಲಿ ಪುತ್ತೂರು ತಾಲೂಕಿನ ಸ್ಪರ್ಧೆಯಲ್ಲಿ ಭಾಗವಹಿಸಿ ನಮ್ಮ ಕರಾಡ ಸಮುದಾಯದ ಅಂಬಿಕಾ ಮಠದಮೂಲೆ ಮೊದಲನೇ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದರು.  ಸೆಮಿಫೈನಲ್ ನ್ನು ಬೆಳಗಾವಿ ಹಾಗೂ ಬೆಂಗಳೂರು - ಈ ಎರಡು ಕೇಂದ್ರಗಳಲ್ಲಿ ನಡೆಸಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಭಾಗವಹಿಸಿದ್ದ ಸುಮಾರು 95 ಮಂದಿಯಲ್ಲಿ ಟಾಪ್ 15 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದ್ದು, ಅಂಬಿಕಾ ಅವರು ಟಾಪ್ 3ರಲ್ಲಿ ಅದರಲ್ಲೂ ವಿನ್ನರ್ ಆಗಿ ಸ್ಥಾನ ಪಡೆದು ಗಮನ ಸೆಳೆದರು. ಸೆಮಿಫೈನಲ್‌ನಲ್ಲಿ ಸ್ಪರ್ಧಿಗಳಿಗೆ ನೀಡಿದ ಸೀಮಿತ ಪದಾರ್ಥಗಳನ್ನು ಬಳಸಿ ಅಡುಗೆ ಮಾಡಬೇಕಾಗಿತ್ತು. ತಮ್ಮ ವಿಶಿಷ್ಟ ಅಡುಗೆ ಕೌಶಲ್ಯದಿಂದ ಅಂಬಿಕಾ ಅವರು ಸೆಮಿಫೈನಲ್‌ನಲ್ಲಿ ವಿನ್ನರ್ ಆಗಿ ಹೊರಹಿಮ್ಮಿದರು.

ಈ ಸ್ಪರ್ಧೆಯ ಗ್ರಾಂಡ್ ಫಿನಾಲೆಗೆ ಒಟ್ಟು 30 ಮಂದಿ ಆಯ್ಕೆಯಾಗಿದ್ದು, ಅಂತಿಮ ಹಂತದಲ್ಲಿ ವಿನ್ನರ್ ಹಾಗೂ ರನ್ನರ್-ಅಪ್‌ಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂಬಿಕಾ ಅವರ ಈವರೆಗಿನ ಸಾಧನೆಗೆ ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು, ಹಾಗೂ ಮುಂದಿನ ಫೈನಲ್ ಹಂತಕ್ಕೆ ಶುಭ ಹಾರೈಕೆಗಳು.






ಪುತ್ತೂರಿನಲ್ಲಿ ನಡೆದ ಮೊದಲ ಹಂತದ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿ ಸೆಮಿಫೈನಲ್ ಗೆ ಆಯ್ಕೆಯಾದಾಗ  .....



FoodWomen
'ಕರುನಾಡ ಸ್ವಾದ ' ಸ್ಪರ್ಧೆಯಲ್ಲಿ ಗ್ರಾಂಡ್ ಫಿನಾಲೆಗೆ ಆಯ್ಕೆಯಾದ ಅಂಬಿಕಾ ಮಠದಮೂಲೆ