Karada Vishwa

Article · August 17, 2026

ನಾಗಪಂಚಮಿ ಹಬ್ಬ

By ಗಾಯತ್ರಿ ಕೆ ನಾಗರಾಜ

✍🏻 ಗಾಯತ್ರಿ ನಾಗರಾಜ ಅಡ್ಕತ್ತೊಟ್ಟು

ಹಸಿರೊಸೆದ ಶ್ರಾವಣ ಮಾಸ
ಪಂಚಮಿಯ ಶುಭ ದಿವಸ.
ಹುತ್ತದ ನಾಗಗೆ ಹರಕೆ
ಮನದಲಿ ಭಕ್ತಿಯ ಹರಕೆ.

ಶ್ರಾವಣದ ಮಳೆ ಸಿಂಪಡಿಸಿ
ಹೊಲ-ಗದ್ದೆಗೆ ಸಿರಿ ತರಲಿ.
ನಾಗದೇವನ ಕೃಪೆಯಲಿ
ಪ್ರತಿಯೊಂದು ಮನೆಯೂ ಬೆಳಗಲಿ.

ಅಣ್ಣನ ಪ್ರೀತಿ ಗೂಡಿನ ರೀತಿ
ತಂಗಿಯ ನಗೆಯು ಬೆಳಕಿನ ಧಗೆಯು
ರೋಷ-ದ್ವೇಷಗಳ ತೊರೆದು ಮರೆತು
ಒಂದಾಗುವ ಶುಭ ಹಬ್ಬವಿದು.

ಅಣ್ಣ-ತಂಗಿಯ ಬಾಂಧವ್ಯಕೆ
ಆಶೀರ್ವಾದದ ಬೇಡಿಕೆ.
ಸುಖ-ಶಾಂತಿ ಕರುಣಿಸು ಮನೆಮನದಿ
ನಾಗಪಂಚಮಿಯ ಪುಣ್ಯದಿನದಿ

ಹಾವಿಗೆ ಹಿಂಸೆ ಮಾಡದಿರು ಎಂಬ
ಪ್ರಕೃತಿಯೇ ಧರ್ಮ ಸಾರುವುದು
ಜೀವಿಗಳೆಲ್ಲ ಒಂದೇ ಎಂಬ
ಸಹಬಾಳ್ವೆಯ ಪಾಠವ ಕಲಿಸುವುದು

ಕಷ್ಟಗಳೆಲ್ಲ ಪರಿಹಾರವಾಗಿ
ಮನದಲ್ಲಿ ನೆಮ್ಮದಿ ನೆಲೆಸಲಿ.
ನಾಗಪಂಚಮಿಯ ಪುಣ್ಯದಿನದಿಂ
ಸಕಲರಿಗೂ ಶುಭವಾಗಲಿ

Creative Writings