
News · April 24, 2026
ಶಂಕರ ಜಯಂತಿ ಪ್ರಯುಕ್ತ ಅಗಲ್ಪಾಡಿಯಲ್ಲಿ ಸಾಮೂಹಿಕ ಬ್ರಹ್ಮೋಪದೇಶ
'ಋಗ್ವೇದೀಯ ನಿತ್ಯಕರ್ಮ ವಿಧಿ' ಪರಿಷ್ಕೃತ ಆವೃತ್ತಿಯ ಬಿಡುಗಡೆ.
ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ) ಅಗಲ್ಪಾಡಿ ಯ ಅಗಲ್ಪಾಡಿ ವಲಯ ಸಮಿತಿಯ ಮುಂದಾಳುತ್ವದಲ್ಲಿ ಹಾಗೂ ಕರಾಡ ವೈದಿಕ ಸಭಾದ ಮಾರ್ಗದರ್ಶನದೊಂದಿಗೆ ದಿನಾಂಕ 20.04.2026 ಸೋಮವಾರದಂದು ಅಗಲ್ಪಾಡಿ ದೇವಸ್ಥಾನದಲ್ಲಿ ಶಂಕರ ಜಯಂತಿ ಪ್ರಯುಕ್ತ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು. ಶಂಕರ ಜಯಂತಿ ಆಚರಣೆ ಹಾಗೂ ಉಪನಯನದ ಮೇಧಾಜನನ ಕಾರ್ಯಕ್ರಮಗಳು 21.04.2026 ರಂದು ಜರುಗಿದವು. ಆ ಪ್ರಯುಕ್ತ ಬೆಳಗ್ಗೆ 11:00 ಕ್ಕೆ ಜರಗಿದ ಸಭೆಯಲ್ಲಿ ಅಗಲ್ಪಾಡಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಶ್ರೀ ವಾಸುದೇವ ಭಟ್ ಉಪ್ಪಂಗಳ ಇವರು ದಿ. ಕೃಷ್ಣ ಭಟ್ ಪೆರ್ಲ ಇವರು ರಚಿಸಿ ಕರಾಡ ವೈದಿಕ ಸಭಾದ ಸದಸ್ಯರಿಂದ ಇತ್ತೀಚೆಗೆ ಪರಿಷ್ಕೃತಗೊಂಡ 'ಋಗ್ವೇದೀಯ ನಿತ್ಯಕರ್ಮ ವಿಧಿ' ಎಂಬ ಪುಸ್ತಕದ ಬಿಡುಗಡೆಯನ್ನು ನೆರವೇರಿಸಿದರು. ಶಂಕರ ಜಯಂತಿ ಆಚರಣೆಯ ಅಂಗವಾಗಿ ಡಾ. ರಾಧಾಕೃಷ್ಣ ಭಟ್ ಬೆಂಗ್ರೋಡಿ, ಉಪನ್ಯಾಸಕರು, ಸಂಸ್ಕೃತ ಮಹಾವಿದ್ಯಾಲಯ ಉಡುಪಿ ಇವರು ಶಂಕರಾಚಾರ್ಯರ ಜೀವನ ಆದರ್ಶಗಳನ್ನು ಕುರಿತು ಉಪನ್ಯಾಸ ನೀಡಿದರು. ನೂತನ ವಟುಗಳಿಗೆ ಉಪನಯನದ ಮತ್ತು ವೇದಾಧ್ಯಯನದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ. ಬ್ರಾ. ಅ. ಸಂಘ (ರಿ) ಅಗಲ್ಪಾಡಿಯ ಅಧ್ಯಕ್ಷರಾದ ಶ್ರೀ ರಮಾನಂದ ಎಡಮಲೆ ಇವರು ವಹಿಸಿದ್ದರು. ಸಂಘದ ಹಿರಿಯ ಕಾರ್ಯಕರ್ತರಾದ, ಶ್ರೀ ಮಾಧವ ಭಟ್ ಕೊಟ್ಟಂಗುಳಿ, ಶ್ರೀ ವೆಂಕಟೇಶ ಭಟ್ ಆಟಿಕುಕ್ಕೆ, ಶ್ರೀ ರಾಜಾರಾಮ ಗುರುಕುಲ ಪೆರ್ಲ ಹಾಗೂ ಮಂಗಳೂರು ಕರಾಡ ಸಂಘದ ಅಧ್ಯಕ್ಷ ಶ್ರೀ ಶಿವಶಂಕರ ಭಟ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮೊದಲಿಗೆ ಶ್ರೀ ಶ್ರೀನಿವಾಸ ಪ್ರಸಾದ ನೆಲ್ಲಿಕುಂಜೆ ಹಾಗೂ ವೈದಿಕ ಪ್ರಮುಖರಿಂದ ವೈದಿಕ ಪ್ರಾರ್ಥನೆ ನಡೆಯಿತು.
ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ ಚೇರ್ಕುಡ್ಲು ಇವರು ಸ್ವಾಗತ ಕೋರಿದರು ಹಾಗೂ ಶ್ರೀ ಮಧುಸೂದನ ಭಟ್ ತೈರೆ ಇವರು ವಂದಿಸಿದರು. ನಿರೂಪಣೆಯನ್ನು ಶ್ರೀ ಕೃಷ್ಣಮೂರ್ತಿ ಎಡೆಪ್ಪಾಡಿ ಯವರು ನಡೆಸಿಕೊಟ್ಟರು.



Heritage
