Karada Vishwa

Event · May 27, 2025

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಿ ಪ್ರತಿಷ್ಠಾ ದಿನ – ಕಳಭದ ಆಹ್ವಾನ

ಶ್ರೀ ದುರ್ಗಾಪರಮೇಶ್ವರಿ ಪ್ರತಿಷ್ಠಾ ದಿನದ ಕಳಭೋತ್ಸವ ಹಾಗೂ ದೀಪಾರಾಧನೆ – ಭಕ್ತರನ್ನು ಆತ್ಮೀಯವಾಗಿ ಆಹ್ವಾನಿಸಲಾಗುತ್ತಿದೆ.

ಭಗವದ್ಭಕ್ತರೇ,

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ವಿಶ್ವಾವಸು ನಾಮ ಸಂವತ್ಸರದ ವೃಷಭ ಮಾಸದ 17ರಂದು, ಅಂದರೆ 31.05.2025 ಶನಿವಾರದಂದು ಕಳಭ (ಪ್ರತಿಷ್ಠಾ ದಿನ) ನಡೆಯಲಿರುವುದು. ಅಂದು ರಾತ್ರಿ ದೀಪಾರಾಧನೆಯೂ ನಡೆಯಲಿರುವುದು. ಭಕ್ತರು ಬಂದು ಶ್ರೀ ಸರ್ವೇಶ್ವರಿಯ ಪ್ರಸಾದವನ್ನು ಸ್ವೀಕರಿಸಬೇಕಾಗಿ ವಿನಂತಿ.

ವಿ. ಸೂ :

(1) ಪೂರ್ವಾಹ್ನ 11 ಗಂಟೆಗೆ ತುಲಾಭಾರ ಸೇವೆ ನಡೆಸಿ ಕೊಡಲಾಗುವುದು.( ಒಂದು ದಿನ ಮುಂಚಿತವಾಗಿ ಕಾರ್ಯಾಲಯಕ್ಕೆ ಸೂಚಿಸತಕ್ಕದ್ದು)

(2) ಭಕ್ತರಿಂದ ಸೇವಾ ರೂಪದಲ್ಲಿ ದೀಪದ ಎಣ್ಣೆ, ಅಕ್ಕಿ,ತೆಂಗಿನಕಾಯಿ, ಬಾಳೆಯ ಎಲೆಗಳು, ಹೂ, ತರಕಾರಿಗಳನ್ನು ಸ್ವೀಕರಿಸಲಾಗುವುದು.

ಇತೀ,

ಶ್ರೀ ಕ್ಷೇತ್ರ ಅಗಲ್ಪಾಡಿ ಆಡಳಿತ ಮಂಡಳಿ.

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಿ ಪ್ರತಿಷ್ಠಾ ದಿನ – ಕಳಭದ ಆಹ್ವಾನ