
Article · September 9, 2026
ದೇವಿ ಮೂಕಾಂಬಿಕೇ
By ಜಯಶ್ರೀ,ಕೆ.ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
ರಕ್ಕಸರ ಸಂಹರಿಸಿ ದೇವಿಯು ನಗುತ್ತ ಕಲ್ಲಾಗಿ ನಿಂತಾಗ ಹೀಗನಿಸುತ್ತಿದೆ..
ಮೂಕಾಂಬಿಕೇ ನಿನ್ನ
ಮೊಗದಲ್ಲಿ ನಗುವೇಕೆ ?
ರಕ್ಕಸರ ಕೊಂದ ಖುಷಿ ಏನು?
ಕಲ್ಲಾಗಿ ದೇಗುಲದಿ
ಸುಮ್ಮನೇ ನಿಂತಿರುವೆ,
ಈಗೇಕೆ ಬರುತಿಲ್ಲ ನೀನು?
ತ್ರಿಲೋಕ ಸುಂದರಿಯೆ
ಏಕಿಂತು ಕಲ್ಲಾದೆ
ಬೇಸರವು ನಿನಗೆ ಬರದೇನು?
ದುರುಳ ಮರ್ದನಕೆಂದು
ಮತ್ತೊಮ್ಮೆ ಧರೆಗೆ ಬಾ
ಮನಸು ಕರಗದೆ ನಿನಗೆ ಇನ್ನೂ ?
ಖಡ್ಗ ಶೂಲಗಳೆಲ್ಲ
ಕೈಯಲ್ಲೇ ಉಳಿದಿಹವು,
ವ್ಯರ್ಥವಾಗದೆ ನಿನ್ನ ಶಕ್ತಿ ?
ಬಾರದಿದ್ದರು ಏನು?
ಯೋಗ್ಯರಿಗೆ ನೀಡಮ್ಮ
ದುಷ್ಟರನು ದಮನಿಸುವ ಶಕ್ತಿ!
Creative Writings
