
Article · November 26, 2025
ಸುರೇಶ್ ಬಾಜಿತ್ತೊಟ್ಟಿ : ಕರಾಡ ಸಮುದಾಯದ ಹವ್ಯಾಸೀ ಕಲಾವಿದರು
ಬಾಲ್ಯದಿಂದಲೇ ಚಿತ್ರಕಲೆಯ ಮೇಲೆ ತುಂಬ ಆಸಕ್ತಿ ಬೆಳೆಸಿಕೊಂಡ ಸುರೇಶ್ ಬಾಜಿತ್ತೊಟ್ಟಿ ಅವರು, ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾಭ್ಯಾಸದ ಜೊತೆಗೆ ಹಲವಾರು ಚಿತ್ರಕಲಾ ಪ್ರದರ್ಶನಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.
ವಿವೇಕಾನಂದ ಮಹಾವಿದ್ಯಾಲಯದಲ್ಲಿ ಜರುಗಿದ ಪುತ್ತೂರು ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಹಾಗೂ ಪೆರ್ಲ ಗ್ರಾಮದಲ್ಲಿ ನಡೆದ ಕರಾಡ ದಶಮಾನೋತ್ಸವ ಕಲಾ ಪ್ರದರ್ಶನಗಳಲ್ಲಿ ಇತರ ಕಲಾವಿದರೊಂದಿಗೆ ಸಹಭಾಗಿಯಾಗಿ ತಮ್ಮ ಕಲಾತ್ಮಕ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ದೂರಸಂಪರ್ಕ ಇಲಾಖೆಯಲ್ಲಿ ವೃತ್ತಿಯನ್ನು ನಿರ್ವಹಿಸುತ್ತಿದ್ದ ಇವರು ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದಲ್ಲಿ ವಾಸ್ತವ್ಯವಿದ್ದು, ನಿವೃತ್ತಿಯ ಬಳಿಕ ತಮ್ಮ ಹವ್ಯಾಸವನ್ನು ಮುಂದುವರೆಸಿಕೊಂಡಿದ್ದಾರೆ.
ಇವರ ಕಲಾಸಕ್ತಿ ಇನ್ನಷ್ಟು ವೃದ್ಧಿಸಲಿ ಎಂಬ ಶುಭ ಹಾರೈಕೆಗಳು .
ಸುರೇಶ್ ಬಾಜಿತ್ತೊಟ್ಟಿ ಅವರ digital painting ನ ಕೆಲವು ಮಾದರಿಗಳು ಇಲ್ಲಿವೆ :






Art
