Karada Vishwa

Article · October 15, 2026

ನವರಾತ್ರಿ ಪೂಜೆ ಇದು ಎಷ್ಟು ಚಂದವೊ

By ರಾಧಾಕೃಷ್ಣಭಟ್ ಕುರುಮುಜ್ಜಿ

ರಾಧಾಕೃಷ್ಣಭಟ್ ಕುರುಮುಜ್ಜಿ

ಗೋಸಾಡದಲ್ಲಿರುವ ನಮ್ಮೂರ ಕ್ಷೇತ್ರದಲ್ಲಿ ನವರಾತ್ರಿ ಪೂಜೆಯನ್ನು ನೋಡಿದಾಗ ಮನಸಿಗೆ ಅನಿಸಿದ ಒಂದು ಭಕ್ತಿಗೀತೆ

ನವರಾತ್ರಿ ಪೂಜೆ ಇದು ಎಷ್ಟುಚಂದವೊ
ನಮ್ಮತಾಯ ನೋಡಲೆಮಗೆ ಆನಂದವೊ|೧|


ನವದಿನಗಳ ಪೂಜೆಯು ನಮ್ಮತಾಯಿಗೆ
ನವವಿಧಗಳ ಪೂಜೆಯು ನಮ್ಮಮಾತೆಗೆ
ನವರೀತಿಯ ಅಲಂಕಾರ ನಿತ್ಯ ಇವಳಿಗೆ
ನವನವೀನವೆಲ್ಲವು ಜಗದಾಂಬೆಗೆ |೨|

ಕುಳಿತಭಂಗಿಯಲ್ಲಿ ತಾಯಿ ಹರಸುತಿರುವಳೆ
ಎಂದು ಮನಕೆ ಅನಿಸಿಕೆ ಇವಳ ನೋಡಲು
ಇವಳ ಕರುಣೆ ಇದ್ದರೇನೆ ಎಲ್ಲಸಾಧ್ಯವು
ಆಸಾಧ್ಯವೆಂಬುದಿಲ್ಲ ಸಾಧ್ಯ ಇವಳಿಗೆಲ್ಲವು |೩|

ಇವಳು ಎಣಿಸಿದಂತೆ ಕಾರ್ಯ ಎಲ್ಲಾ ನಡೆವುದು
ನಾನು ನನ್ನದೆಂಬುದಿಲ್ಲಿ ಏನುನಡೆಯದು
ನವರಾತ್ರಿ ಪೂಜೆಯನ್ನು ಬನ್ನಿ ನೋಡುವ
ತಾಯ ಮಹಿಮೆಯನ್ನು ನಾವು ಹಾಡಿಹೊಗಳುವ |೪|

Creative Writings