
News · September 6, 2025
ಓಣಂ ಹಬ್ಬದ ಆಚರಣೆ ಹಾಗೂ ಅಗಲ್ಪಾಡಿ ವಲಯದ ಮಹಿಳಾವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ
3-8-2025ರಂದು ಶ್ರೀಮತಿ ಶುಭ ಕೋಳಿಕ್ಕಜೆ ಇವರ ನಿವಾಸದಲ್ಲಿ ನಡೆದ ಕಾರ್ಯಕ್ರಮ
ಪ್ರೀತಿಯ ಕರಾಡ ಬಾಂಧವರೇ,
ದಿನಾಂಕ 3 -8- 2025 ನೇ ಬುಧವಾರ ಅಪರಾಹ್ನ ಗಂಟೆ 2 ರಿಂದ ಶ್ರೀಮತಿ ಶುಭ ಕೋಳಿಕ್ಕಜೆ ಇವರ ನಿವಾಸದಲ್ಲಿ ಓಣಂ ಹಬ್ಬದ ಆಚರಣೆಯೊಂದಿಗೆ ಅಗಲ್ಪಾಡಿ ವಲಯದ ಮಹಿಳಾವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಹಲವು ಮನೋರಂಜನಾ ಆಟಗಳೊಂದಿಗೆ ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು. ಅಗಲ್ಪಾಡಿ ವಲಯದ ಮಹಿಳಾ ವೇದಿಕೆಯ ನೂತನ ಅಧ್ಯಕ್ಷರಾಗಿ ಶ್ರೀಮತಿ ಶುಭಶ್ರೀ ಕಾನಕ್ಕೋಡು, ಉಪಾಧ್ಯಕ್ಷರಾಗಿ ಶ್ರೀಮತಿ ಉಷಾ ಮವ್ವಾರು, ಕಾರ್ಯದರ್ಶಿಯಾಗಿ ಶ್ರೀಮತಿ ದೀಪಾ ಪಾರ್ತಕೊಚ್ಚಿ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಗಾಯತ್ರಿ ಕೋಳಿಕೈಜಿ ಇವರನ್ನು ಆಯ್ಕೆ ಮಾಡಲಾಯಿತು. ಸುಮಾರು 30 ಕ್ಕೂ ಅಧಿಕ ಕರಾಡ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲಘು ಉಪಾಹಾರದೊಂದಿಗೆ ಸಂಜೆ 5 ಗಂಟೆಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
