Karada Vishwa

Article · November 20, 2026

ಬಾನಿನಾಚೆ...

By ಜಯಶೀ ಕೆ. ಆರ್ ಭಟ್. ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ನೀಲಿ ಗಗನದಲಿ
ನೀಲವರ್ಣದಲಿ
ತೇಲಿ ಮೇಘರಾಶಿ /

ತಿರುಗಿ ಸುತ್ತಿ
ಮತ್ತಲ್ಲೆ ಸೇರುವುದು
ತಂಪು ಗಾಳಿ ಬೀಸಿ /

ಮಿಂಚು ಮಿಂಚಿತೂ
ಗುಡುಗು ಗುಡುಗಿತು
ನಡೆದು ವಾದ್ಯ ಮೇಳ /

ಸುರಿದು ಸುರಿದು ಮಳೆ
ರಾಗ ವೆಳೆಯಿತೂ
ಅದುವೇ ಹಿಂದೋಳ /

ನಡುವೆ ನಡುವೆಯೇ
ಅಮೃತವರ್ಷಿಣಿಯ
ಧಾರೆಧಾರೆ ಸುರಿದೂ /

ಮಾಯವಾಯಿತು
ನೀಲ ಮೇಘಗಳು
ಬಾನಿನಾಚೆ ಸರಿದೂ //

Creative Writings