Karada Vishwa

Article · November 5, 2026

ಚುಟುಕುಗಳು

By ರಾಧಾಕೃಷ್ಣ ಭಟ್;ಕುರುಮುಜ್ಜಿ(ಚುಟುಕುಗಳು)

ರಾಧಾಕೃಷ್ಣ ಭಟ್ ಕುರುಮುಜ್ಜಿ

ಹೇಳಿದ್ದು?

ಹೇಳಿದ್ದೆ ತರಲು ಮಡದಿಯಲ್ಲಿ
ಪೀವೀಸಿ ಪೈಪಿಗೆ ಇರುವ s-bend
ಯಾರು ಹೇಳಿದ್ದೆಂದು ಅವಳಲ್ಲಿ
ಕೇಳುವಾಗ ಹೇಳಿದಳಂತೆ husband

ಕೊನೆಗಾಲದಲ್ಲಿ!

ದಶರಥ ವಿವರಿಸಿದ್ದು ಮೂವರ
ಮರಣಕ್ಕೆ ಕಾರಣ ಎರಡು ವರ
ಕೊನೆಗಾಲದಲ್ಲಿ ಅನಿಸಿರಬಹುದೇ
ಮಹಾದುಷ್ಠೆ ಕೈಕೇಯಿಗೆ ವರ ಏಕಾದೆ?

ಪ್ರಿಯೆ ನಿನಗಾಗಿ?

ಪ್ರಿಯೆ ನಿನ್ನನ್ನು ಕರೆದುಕೊಂಡು ಹೋಗಿ
ತೋರಿಸದಿದ್ದರೂ ಮೈಸೂರ್ ಪಾರ್ಕ್
ಇಲ್ಲಿಗೇ ತಂದಿದ್ದೇನೆ ನೋಡು ನಿನಗಾಗಿ
ತಿನ್ನಲು ಬೇಕರಿಯಿಂದ ಮೈಸೂರ್ ಪಾಕ್


ಹೇಗೆ ತರಲಿ?

ಪೇಟೆಗೆ ಹೊರಟಾಗ ಹೇಳಿದಳು
ಬರುವಾಗ ನೀವು ತರಬೇಕು ಗುಡ್ಡೆ
ಗುಡ್ಡೆ ಹೇಗೆ ತರಲಿ? ಕೇಳಿದಾಗ ನಕ್ಕಳವಳು
ಹೇಳಿ ನಾನೆಂದದ್ದು ಬಿಸ್ಕೇಟ್ ಮೇರಿ goodday

ಚಾ‌ ಸುಪ್ರಭಾತ

ಚಹಾ ರೆಡೀರಿ ನೀವು ಬೇಗ ಏಳಿ
ಹೊದಿಕೆ ಸರಿಸಿ ಹೋಗುವಳು ಹೇಳಿ
ಹೇಳುವೆನು ಚಾ-ಸುಪ್ರಭಾತವ ಕೇಳಿ
ಸಾರ್ಥಕವಾಯಿತು ಕಟ್ಟಿದ್ದಕ್ಕೆ ತಾಳಿ
ಆಗದಿದ್ದರೆ ಹೇಳುವಳು ಸ್ವಲ್ಪ ತಾಳಿ






Creative Writings