Karada Vishwa

News · November 25, 2026

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಆಯುಷಿ ಭಟ್‌ಗೆ ಅತ್ಯುತ್ತಮ ಸಾಧಕಿ ಪ್ರಶಸ್ತಿ

ಕರಾಡ ವಿಶ್ವದ ಅಭಿನಂದನೆಗಳು

22.11.2026 ರಂದು ಕೊಚ್ಚಿಯಲ್ಲಿ ನಡೆದ ರಾಷ್ಟ್ರಮಟ್ಟದ SIP ಅಬಾಕಸ್ ಸ್ಪರ್ಧೆಯಲ್ಲಿ ಆಯುಷಿ ಭಟ್ ಕೆ.ಎನ್. ಅವರು ಅತ್ಯುತ್ತಮ ಸಾಧಕಿ ಪ್ರಶಸ್ತಿ (Best Performer Award) ಪಡೆದು ಸಾಧನೆ ಮಾಡಿದ್ದಾರೆ.

ಕೆದುಕೋಡಿಯ ನಿತ್ಯಾನಂದ ಕೆ.ಆರ್. ಮತ್ತು ಅರ್ಚನಾ ಸಿ.ಎಚ್. ದಂಪತಿಯ ಪುತ್ರಿಯಾಗಿರುವ ಆಯುಷಿ, ಪ್ರಸ್ತುತ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಈ ಸಾಧನೆಗೆ ಆಯುಷಿ ಭಟ್ ಅವರಿಗೆ ಕಾರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಯಶಸ್ಸು ನಿಮ್ಮದಾಗಲಿ.

Achievers