
Article · October 15, 2026
ನವದುರ್ಗೆಯರು
By ಗಾಯತ್ರಿ ಕೆ ನಾಗರಾಜ
ಗಾಯತ್ರಿ ಕೆ ನಾಗರಾಜ್ ಅಡ್ಕತೊಟ್ಟಿ
ಶೈಲಪುತ್ರಿ
ನವರಾತ್ರಿಯ ಮೊದಲ ದಿನ ಶೈಲಪುತ್ರಿ ನಲಿದಳು
ಶಿವಪುತ್ರಿಯು ವೃಷಭವನೇರಿ ಭಕ್ತರ ಸಲಹಿದಳು
ಬ್ರಹ್ಮಚಾರಿಣಿ
ಬ್ರಹ್ಮಚಾರಿಣಿ ತಪದ ಮೂರ್ತಿಯಾಗಿ ನಿಂದಳು
ಬ್ರಹ್ಮಜ್ಞಾನವ ನೀಡಿ ಮೋಕ್ಷದ ದಾರಿ ತೋರಿದಳು
ಚಂದ್ರಘಂಟಾ
ಚಂದ್ರಘಂಟಾ ದೇವಿ ಗಂಟೆನಾದ ಮೊಳಗಿದಳು
ಇಂದ್ರಾದಿಗಳಿಗೂ ಅಭಯವಿತ್ತು ದುಷ್ಟರಳಿಸಿದಳು
ಕೂಷ್ಮಾಂಡಾ
ಕೂಷ್ಮಾಂಡಾ ದೇವಿ ಉದರದಿ ಜಗವನ್ನೇ ಇಟ್ಟಳು
ಸೂಷ್ಮಾಂಶದಿಂದ ಸೃಷ್ಟಿಯ ಬೆಳಕನು ಚೆಲ್ಲಿದಳು
ಸ್ಕಂದಮಾತಾ
ಸ್ಕಂದಮಾತೆಯು ಮಗನ ಪ್ರೀತಿಯ ತೋರಿದಳು
ಚಂದದಿಂದ ಭಕ್ತರಿಗೆ ವಾತ್ಸಲ್ಯ ನೀಡಿದಳು
ಕಾತ್ಯಾಯನೀ
ಕಾತ್ಯಾಯನಿ ಮಹಿಷಮರ್ದಿನಿಯಾಗಿ ಮೆರೆದಳು
ಸತ್ಯಾರಾಧಕರ ಕಷ್ಟವ ಕಳೆದು ಕಾಯ್ದಳು
ಕಾಲರಾತ್ರಿ
ಕಾಲರಾತ್ರಿ ಕರಾಳ ರೂಪದಲಿ ನಿಂದಳು
ಶೂಲಧಾರಿಯಾಗಿ ಭೂತ ಭಯವ ನೀಗಿದಳು
ಮಹಾಗೌರೀ
ಮಹಾಗೌರಿ ಶ್ವೇತವರ್ಣದಲಿ ಶೋಭಿಸಿದಳು
ಸಹಾಯಕಳಾಗಿ ಪಾಪವ ಕಳೆದು ಮೋಕ್ಷವಿತ್ತಳು
ಸಿದ್ಧಿದಾತ್ರೀ
ಸಿದ್ಧಿದಾತ್ರಿ ಸಕಲ ಸಿದ್ಧಿಯ ನೀಡುವಳು
ಬುದ್ಧಿಯೊಳಗೆ ಜ್ಞಾನದೀಪವ ಬೆಳಗುವಳು
