Karada Vishwa

Article · November 10, 2026

ಮೌನದೊಳಗಿನ ಮಾತು

By ಗಾಯತ್ರಿ ಕೆ

ಗಾಯತ್ರಿ ಕೆ ಅಡ್ಕತೊಟ್ಟಿ

ಮನದ ಕುಸುಮದಲ್ಲಿ ಅರಳಿದ ಭಾವವು
ಹಬೆಯಾಗಿ ಏರಿ ಸೇರಿದ ಆಗಸವು
ಯಾರನ್ನೋ ಕರೆದಿತೋ ದೂರಿತೋ ಕಾಲವು
ಚಪ್ಪಲಿಯಡಿ ನಲುಗಿತೇ ಜೀವವು

ನಮ್ಮವರು ನಮ್ಮವರೆಂದೆನು ನಾನು
ಅದೇ ತಪ್ಪಾಯಿತೇ ಎಂದು ಕೊರಗಿದೆನು
ಹೇಳದೆ ಉಳಿದ ಮಾತು ಕಲ್ಲಾಯಿತು ಎದೆಯಲಿ
ಎಂದು ತಿಳಿದರೂ ಸಹಿಸಿದೆನು ಆಳದಲಿ

ಬೆಂದು ಬಸವಳಿದ ಜೀವಕೆ ಬೇಕು ಸಾಂತ್ವನ
ದೊಡ್ಡ ಮಾತಲ್ಲ ಬೇಡ ಉಪದೇಶದ ವಚನ
ಹೆದರಬೇಡ ನಾನಿದ್ದೇನೆ ಎನ್ನುವ ಜನ
ಒಂದು ನೋಟವೇ ಸಾಕು ನಿರ್ಮಲ ಮನ

ಮೌನದಿ ಎಲ್ಲವನು ಸಹಿಸಿ ಕಾದೆ
ಒಂದು ಮಿತಿಯು ತಾಳ್ಮೆಗೂ ಇದೆ
ಮೌನಕ್ಕೆ ಧ್ವನಿ ಬಂದರದು ಸಿಡಿಲು
ಎಂದುಕೊಂಡರೆ ಅದೇ ನಿನ್ನ ದೊಡ್ಡ ಸೋಲು

ಮೌನದ ಮೊಟ್ಟೆಯು ಒಡೆದು ಬರಲಿಲ್ಲ ಮಾತು
ಬರುವಷ್ಟರಲ್ಲಿ ಮನವೇ ಆಗಿದೆ ತೂತು
ಯಾರಿಗೂ ಯಾರಿಲ್ಲ ನಮ್ಮವರು
ಇದೇ ಸತ್ಯವೆಂದು ತಿಳಿಸಿದರು

ಆದರೂ ಕೇಳು ಮೌನವೆಂದರೆ ಸೋಲಲ್ಲ
ಅದು ಮಾತಿಲ್ಲದ ಪ್ರೀತಿಯ ಒಡಲಲ್ಲ
ನೀನು ಅರಿತರೆ ಅದು ಆಗುವುದು ಕವನ
ಅರಿಯದಿದ್ದರೆ ಅದು ಮೌನದ ಸದನ

ನೀ ನಗುವಾಗ ನನ್ನ ಮುಖದಲಿ ಹಾಡು
ನೀ ಅಳುವಾಗ ಮೌನವಾಗುವ ಪಾಡು
ನಿನ್ನ ನೆನಪಿನಲ್ಲೇ ಕರಗುವ ಈ ಜೀವ
ಕೊನೆಯವರೆಗೂ ನಿನ್ನದೇ ಆಗುವ ಭಾವ

Creative Writings