
Event · April 26, 2025
ಕರಾಡ ವಿಶ್ವ ವೆಬಿನಾರ್ - 24
ದಿನಾಂಕ : 26 ಏಪ್ರಿಲ್ 2025 ಸಂಜೆ 7.30ರಿಂದ ; ಸಂಪನ್ಮೂಲ ವ್ಯಕ್ತಿ : ಶ್ರೀ ಅನಂತ ಕೃಷ್ಣ ಪೈರುಪುಣಿ
ಈ ಸರಣಿ ಕಾರ್ಯಕ್ರಮದ ಅಂಗವಾಗಿ 26/04/2025ರ ಶನಿವಾರ ಸಂಜೆ 7.30ಕ್ಕೆ ನಾವು, ನಮ್ಮ ಆಹಾರ, ನಮ್ಮ ಆರೋಗ್ಯ ಎನ್ನುವ ವಿಷಯದ ಕುರಿತು ಶ್ರೀಯುತ ಅನಂತಕೃಷ್ಣ ಭಟ್ಟ ಪೈರುಪುಣಿ ಇವರು ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.
ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗೆ ಕೊಟ್ಟ ಲಿಂಕ್ ಮೂಲಕ ಕಾರ್ಯಕ್ರಮ ನಡೆಯುವ ದಿನದಂದು ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.
ಗೂಗಲ್ ಲಿಂಕ್: https://meet.google.com/jwo-yvyb-etc
ನಿರ್ವಹಣೆ, ಸ್ವಾಗತ, ನಿತ್ಯ ಪಂಚಾಂಗ : ಶ್ರೀ ರವೀ ಸಜಂಗದ್ದೆ
ಪ್ರಾರ್ಥನೆ : ಕುಮಾರಿ ಭುವಿ ಸಜಂಗದ್ದೆ
ವ್ಯಕ್ತಿ ಪರಿಚಯ : ಶ್ರೀ ನಾಗರಾಜ ಉಪ್ಪಂಗಳ
ವಿಷಯ ಪ್ರಸ್ತುತಿ : ಶ್ರೀ ಅನಂತ ಕೃಷ್ಣ ಪೈರುಪುಣಿ
ವಿಷಯ :ನಾವು ನಮ್ಮ ಆಹಾರ ನಮ್ಮ ಆರೋಗ್ಯ
ಕರಾಡ ವಿಶ್ವ : ಶ್ರೀ ಚಂದ್ರಹಾಸ ಕನ್ನಡ್ಕ
ಧನ್ಯವಾದ : ಶ್ರೀ ರವೀ ಸಜಂಗದ್ದೆ
ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
* ಪೈರುಪುಣಿ ನಾರಾಯಣ ಭಟ್ಟ - ಸರಸ್ವತಿ ಅಮ್ಮ ದಂಪತಿಯ ದ್ವಿತೀಯ ಪುತ್ರ.
* ಪ್ರೌಢಶಾಲೆಯವರೆಗಿನ ವಿದ್ಯಾಭ್ಯಾಸವನ್ನು ಸುಳ್ಯಪದವಿನಲ್ಲಿ, ಪಿಯುಸಿ ಶಿಕ್ಷಣವನ್ನು ವಿಟ್ಲ ಜ್ಯೂನಿಯರ್ ಕಾಲೇಜಿನಲ್ಲಿ, ಬಿಕಾಂ ಪದವಿಯನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುತ್ತಾರೆ.
* ವಿಟ್ಲ ಮತ್ತು ಪುತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿ ಚುನಾಯಿತರು.
* ಅಂತರ್ ಶಾಲಾ - ಕಾಲೇಜುಗಳ ಸಾಂಸ್ಕೃತಿಕ ಸಂಘಗಳು ನಡೆಸುವ ಭಾಷಣ, ಪ್ರಬಂಧ, ಮಿಮಿಕ್ರಿ, ಏಕಪಾತ್ರಾಭಿನಯ ಮುಂತಾದ ಸ್ಪರ್ದೆಗಳ ಹಲವು ಬಹುಮಾನಗಳು ಶ್ರೀಯುತರಿಗೆ ಸಂದಿವೆ.
* ಭಾರತೀಯ ಜೀವ ವಿಮಾ ನಿಗಮದಲ್ಲಿ 'ಅಭಿವೃದ್ಧಿ ಅಧಿಕಾರಿ'ಯಾಗಿ 30 ವರ್ಷ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿರುತ್ತಾರೆ.
* ನಿವೃತ್ತಿಯ ನಂತರ ಕೃಷಿಯ ಕಾಯಕದಲ್ಲಿ ನಿರತರಾಗಿದ್ದಾರೆ.
* ಹವ್ಯಾಸಗಳಾಗಿ ಸಾವಯವ ಕೃಷಿಯ ಜತೆಗೆ ಗಮಕ ವ್ಯಾಖ್ಯಾನವನ್ನೂ ಮಾಡುತ್ತಿದ್ದಾರೆ. ಮಹಾಕವಿಗಳಾದ ಕುಮಾರವ್ಯಾಸ, ಲಕ್ಷ್ಮೀಶ, ಮುದ್ದಣ, ರನ್ನ, ರಾಘವಾಂಕರ ಕಾವ್ಯಗಳ ಮೇಲೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
* ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘದ ಉಪಾಧ್ಯಕ್ಷರು.
* ಸಿರಿಧಾನ್ಯಗಳ ಕೃಷಿ, ಬಳಕೆ, ಪ್ರಚಾರ ಮತ್ತು ಪ್ರಾತ್ಯಕ್ಷಿಕೆಗಳಲ್ಲಿ ಸಕ್ರಿಯರು.
