
News · January 1, 2026
“ಶ್ರೀ ಅಗಲ್ಪಾಡಿಮಾಹಾತ್ಮ್ಯಮ್” ಗ್ರಂಥ ಲೋಕಾರ್ಪಣೆ
ಕೀರ್ತಿಶೇಷ ಖಂಡೇರಿ ಅನಂತಶಾಸ್ತ್ರಿಗಳಿಂದ ರಚಿತವಾದ “ಶ್ರೀ ಅಗಲ್ಪಾಡಿಮಾಹಾತ್ಮ್ಯಮ್” ಎಂಬ ಕಾವ್ಯದ ಲೋಕಾರ್ಪಣೆ ದಿನಾಂಕ 30/12/2025ರಂದು ಶೃಂಗೇರಿ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರ ಕರಕಮಲಗಳಿಂದ ನೆರವೇರಿತು.
ಅಪ್ರತಿಮ ವಿದ್ವಾಂಸರಾದ ಖಂಡೇರಿ ಅನಂತಶಾಸ್ತ್ರಿಗಳಿಂದ ರಚಿತವಾದ “ಶ್ರೀ ಅಗಲ್ಪಾಡಿಮಾಹಾತ್ಮ್ಯಮ್” ಎಂಬ ಇತಿಹಾಸ ಲಘುಕಾವ್ಯದ ಲೋಕಾರ್ಪಣೆ ದಿನಾಂಕ 30/12/2025ರಂದು ಶೃಂಗೇರಿ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರ ಕರಕಮಲಗಳಿಂದ ಮಂಗಳೂರು ರಾಧಾಕೃಷ್ಣ ದೇವಸ್ಥಾನದಲ್ಲಿ ನೆರವೇರಿತು. ಅಗಲ್ಪಾಡಿ ಪುರ ಹಾಗೂ ಪುರವಾಸಿನಿಯ ಸಮಗ್ರ ಇತಿಹಾಸವನ್ನು ಅನಾವರಣಗೊಳಿಸುವ ಈ ಕಾವ್ಯವನ್ನು ಸರ್ವರಿಗೂ ಸುಲಭವಾಗಿ ಲಭ್ಯವಾಗುವಂತೆ ಶೃಂಗೇರಿಯ ಆಸ್ಥಾನ ವಿದ್ವಾಂಸರಾದ ಕೃಷ್ಣರಾಜ ಭಟ್ ಬೆಂಗ್ರೋಡಿ ಅವರು ಕನ್ನಡ ಭಾವಾರ್ಥವನ್ನು ಬರೆದಿದ್ದಾರೆ. ಈ ಸಂದರ್ಭದಲ್ಲಿ ಪಂಡಿತರು, ಭಕ್ತರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದು, ಗ್ರಂಥದ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಪ್ರಶಂಸಿಸಿದರು.
ಶ್ರೀ ಅಗಲ್ಪಾಡಿ ಮಹಾತ್ಮೆ ಗ್ರಂಥವು ಅಗಲ್ಪಾಡಿ ಕ್ಷೇತ್ರದ ಭಕ್ತರ ಮನೆಗಳಲ್ಲಿ ಅವಶ್ಯವಾಗಿ ಇರಬೇಕಾದ ಅಮೂಲ್ಯ ಕೃತಿಯಾಗಿ ಹೊರಹೊಮ್ಮಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಊರುಗಳಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
