
News · September 29, 2026
ಪೌರೋಹಿತ್ಯಕ್ಕೆ ಘನತೆ ತಂದ ಸಜಂಗದ್ದೆ ಮುದ್ದುಣ್ಣ ಇನ್ನಿಲ್ಲ
ನುಡಿನಮನ : ರಂಗ ಶರ್ಮಾ, ಉಪ್ಪಂಗಳ
ಸಜಂಗದ್ದೆ ನಾರಾಯಣ ಭಟ್ಟ -ಗಿರಿಜಾ ದಂಪತಿಯ ನಾಲ್ವರು ಪುತ್ರರಲ್ಲಿ ಕಿರಿಯವರಾಗಿದ್ದು, ಬಾಲ್ಯದಿಂದಲೇ ವೇದಗಳಲ್ಲಿ ಆಸಕ್ತಿ, ಸೈಪಾಲು ಕಂದಜ್ಜರಿಂದ ಪೌರೋಹಿತ್ಯ ಪಾಠದ ಕಲಿಕೆ.
ಗುರು ಇಟ್ಟಿಣ್ಣ, ಬೇಂಗ್ರೋಡಿ ಮಾಧಪ್ಪಣ್ಣ, ಗುರು ಮೈಕಾನ ರಾಧಣ್ಣ.. ಇವರನ್ನು ಗುರು ಸ್ಥಾನದಲ್ಲಿಟ್ಟು ಹಾಗೂ ಪೌರೋಹಿತ್ಯ ವೃತ್ತಿಗೆ ವಿಶೇಷ ಗೌರವ ಹಾಗೂ ಸ್ಥಾನಮಾನ ಒದಗಿಸಿದ ವ್ಯಕ್ತಿತ್ವ.
ಸ್ಪಷ್ಟ ಉಚ್ಚಾರ, ಏರುದನಿ, ಅರ್ಥಪೂರ್ಣ ಮಂತ್ರಗಳಿಂದ, ಧೈರ್ಯದಿಂದ ಇದಮಿತ್ಥಂ , ಎನ್ನುವ ವ್ಯಕ್ತಿತ್ವ.
'ಮುದ್ದುಣ್ಣನಲ್ಲಿ ಹೇಳಿದರೆ ಸಾಕು ಎಲ್ಲವೂ ಸಾಂಗವಾಗಿ ನೆರವೇರುತ್ತದೆ' ಎಂಬ ಭಾವನೆ ಅವರನ್ನು ಆಮಂತ್ರಿಸುವ ಎಲ್ಲರಲ್ಲೂ ಇತ್ತು.
ಪೌರೋಹಿತ್ಯ ದ ಸಂಪೂರ್ಣ ನೇತೃತ್ವ ಹಾಗೂ ಜವಾಬ್ದಾರಿಯನ್ನು ವಹಿಸಿಕೊಂಡು , ಕಾರ್ಯಕ್ರಮಗಳೆಲ್ಲವೂ ಸಮಯಕ್ಕೆ ಸರಿಯಾಗಿ, ಸಾಂಗವಾಗಿ ನೆರವೇರಿಸಿ ಕೊಡುತ್ತಿದ್ದವರು ನಮ್ಮ ಆತ್ಮೀಯ ಮುದ್ದುಣ್ಣ.
ಮಾಧಪ್ಪಣ್ಣನವರೊಂದಿಗೆ ಅಗಲ್ಪಾಡಿ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಬ್ರಹ್ಮೋಪದೇಶಗಳನ್ನು ಸುಮಾರು 30 ವರ್ಷಗಳಿಂದ, ಅಚ್ಚುಕಟ್ಟಾಗಿ, ಸಮರ್ಪಕವಾಗಿ, ಸಮಯಕ್ಕೆ ಸರಿಯಾಗಿ, ನಡೆಸಿಕೊಟ್ಟ ಕೀರ್ತಿ ಮುದ್ದುಣ್ಣ ಇವರಿಗೇ ಸಲ್ಲಬೇಕು.
ಪೆರ್ಲದ ಶಂಕರಸದನದಲ್ಲಿ ಪ್ರತಿ ರವಿವಾರ ಉಚಿತ ವೇದಪಾಠ ಕಲ್ಲಿಸುತ್ತಿದ್ದ ಮುದ್ದುಣ್ಣ ಹಲವಾರು ವೇದ ಶಿಷ್ಯರನ್ನು ಸೃಷ್ಠಿಸಿದ್ದಾರೆ.
ಮುದ್ದುಣ್ಣ ಇವರ ನಿಧನ ಕೇವಲ ಮನೆಯವರಿಗೆ ಮಾತ್ರವಲ್ಲ ಇಡೀ ಸಮಾಜಕ್ಕೆ ಭರ್ತಿಯಾಗದ, ಭರ್ತಿಮಾಡಲಾಗದ ನಷ್ಟ.
ಅಪಾರ ಗೌರವ, ಪ್ರೀತಿ ಜನಮನ್ನಣೆ, ಜನಬೆಂಬಲವಿದ್ದ ಮುದ್ದುಣ್ಣ ಇನ್ನು ನಮ್ಮೊಂದಿಗಿಲ್ಲ....
