Karada Vishwa

Article · November 16, 2026

ಕೃತಜ್ಞತೆಯ ಕಾವಲು

By ಸೌಮ್ಯ ಗುರು ಕಾರ್ಲೆ

ನ್ಯಾನೋ ಕಥೆ - ಸೌಮ್ಯ ಗುರು ಕಾರ್ಲೆ

ಮಾನವೀಯತೆ ಮೆರೆಯಲು ಮಾನವ ಮರೆತರೂ ಪ್ರಾಣಿಗಳು ಮರೆಯಲಾರವು.

ಬೀದಿ ನಾಯಿಯೆಂದು ಯಾರೊಬ್ಬರೂ ಗೇಟಿನೊಳಗೆ ಸೇರಿಸದೇ ಕಲ್ಲೆಸೆದು ಅಟ್ಟಿದರು. ಅವಳ ಮನೆಗೆ ಗೇಟೇ ಇರಲಿಲ್ಲ.ಹಸಿವಿನಿಂದ ಬಸವಳಿದ ನಾಯಿಗೆ ಆಗ ತಾನೆ ರೆಡಿಯಾಗಿದ್ದ ಅನ್ನದ ಜೊತೆ ಒಂದಿಷ್ಟು ನೀರಿತ್ತಳು.
ನಾಯಿಯೋ ಹಸಿವಿಂಗಿದ ತೃಪ್ತಿಯಿಂದ ಕೃತಜ್ಞತಾ ನೋಟ ಬೀರಿ ಬಾಲ ಅಲ್ಲಾಡಿಸುತ್ತಾ ಮುಂದಕ್ಕೋಯಿತು. ಮರುದಿನ ವೃತ್ತ ಪತ್ರಿಕೆಗಳಲ್ಲಿ ತಲೆಬರಹ ಹೀಗಿತ್ತು
"ಸರಣಿ ಕಳ್ಳತನ ಮಧ್ಯದಲ್ಲಿದ್ದ ಒಂದು ಮನೆಯಲ್ಲಿ ಏನೂ ಕಳವಾದ ಬಗ್ಗೆ ಇನ್ನೂ ದಾಖಲಾಗಿಲ್ಲ".

ಸಂದೇಶ: ಪ್ರೀತಿ ಮತ್ತು ಕರುಣೆ ತೋರಿದ ಜೀವವನ್ನು ಪ್ರಾಣಿಗಳೂ ಮರೆಯುವುದಿಲ್ಲ.

Creative Writings