Karada Vishwa

Article · September 13, 2026

ಹರಿತಾಲಿಕ ವ್ರತ

ವೀಣಾ ಎಂ ಭಟ್

ಭಾದ್ರಪದ ಶುಕ್ಲದ ತದಿಗೆಯ ದಿನದಂದು

ಮಂಗಳ ಗೌರಿಯ ವೃತವು ಬರುವುದು ಅಂದು

ಪರಮ ಶಕ್ತಿಯ ಮಾತೆ ದೇವಿ ಅಂಬಿಕೆಯು

ಬರುವಳು ಮನೆಗೆ ಭಕ್ತರನು ಹರಸಲು ಎಂದು

ಪ್ರಾತಃಕಾಲದ ವೇಳೆ ಮಿಂದು ಮಡಿಯನುಟ್ಟು

ಉಪವಾಸದಿ ಗೌರಿ ವೃತ ಮಾಡುವರೆಲ್ಲ ಸೇರಿ

ತಾಂಬೂಲ ಫಲ ಪುಷ್ಪ ಪತ್ರೆಗಳ ಕೂಡಿಟ್ಟು

ಪಂಚಕಜ್ಜಾಯ ಪಂಚಾಮೃತವ ಮಾಡಿಟ್ಟು

ಆರಾಧಿಸುವೆ ನಿನ್ನ ಅರುಣ ಕಾಲದಿ ತಾಯೆ

ವನದ ಹೂವುಗಳ ಆರಿಸಿ ತಂದ ಪರಿಯೆ

ಸೌರಭವ ಚೆಲ್ಲುವ ಮಲ್ಲಿಗೆ ಜಾಜಿ ಸಂಪಿಗೆಯು

ಪೂಜೆಯದು ಸುಂದರವು ದೇವಿ ಸನ್ನಿಧಿಯು

ಜರತಾರಿ ಸೀರೆ ಹೊನ್ನ ಆಭರಣ ತೊಟ್ಟು

ಕರದೊಳು ಗಾಜಿನ ಹಸಿರು ಕಂಕಣ ತೊಟ್ಟು

ತಲೆಯಲ್ಲಿ ಮಲ್ಲಿಗೆಯ ಮಾಲೆ ತಾ ಮುಡಿದು

ಸಿಂಗಾರದಲಿ ಅಂಗನೆಯರು ಕೂಡಿ ಬಂದು

ಶಿವನಿಗಾಗಿ ತಪಸ್ಸು ಮಾಡಿದಳು ಶ್ರೀ ಗೌರಿ

ಶಿವನೆ ಪತಿಯೆಂದು ಕಠಿಣ ತಪದಲಿ ಆ ಕುವರಿ

ಶಿವನು ಪಾರ್ವತಿಗೊಲಿದ ಪುಣ್ಯದ ದಿನವಿದು

ಶಿವೆ ನೀಡು ಮಾಂಗಲ್ಯ ಸೌಭಾಗ್ಯವ ನನಗೆಂದೂ

Creative Writings