
Event · June 12, 2025
ಕರಾಡ ವಿಶ್ವ ವೆಬಿನಾರ್ ಸರಣಿ -26
ದಿನಾಂಕ : 14/06/2025ರ ಶನಿವಾರ ಸಂಜೆ 7.30ಕ್ಕೆ ; ಸಂಪನ್ಮೂಲ ವ್ಯಕ್ತಿ : ಶ್ರೀಮತಿ ಚೇತನಾ ವಿಶ್ವಕುಮಾರ್ ಕಾಯರ್ಗದ್ದೆ ; ವಿಷಯ : "ಭಗವದ್ಗೀತೆಯ ಕೆಲವು ಮುಖ್ಯ ಅಂಶಗಳು"
ಕರಾಡ ವಿಶ್ವ ವೆಬಿನಾರ್ ಸರಣಿ ಕಾರ್ಯಕ್ರಮದ ಅಂಗವಾಗಿ 14/06/2025ರ ಶನಿವಾರ ಸಂಜೆ 7.30ಕ್ಕೆ 'ಭಗವದ್ಗೀತೆಯ ಕೆಲವು ಮುಖ್ಯ ಅಂಶಗಳು' ಎನ್ನುವ ವಿಷಯದ ಕುರಿತು ಶ್ರೀಮತಿ ಚೇತನಾ ವಿಶ್ವಕುಮಾರ್ ಕಾಯರ್ಗದ್ದೆ ಇವರು ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.
ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗೆ ಕೊಟ್ಟ ಲಿಂಕ್ ಮೂಲಕ ಕಾರ್ಯಕ್ರಮ ನಡೆಯುವ ದಿನದಂದು ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.
ಗೂಗಲ್ ಲಿಂಕ್: https://meet.google.com/jwo-yvyb-etc
ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
* ಪಂಜಿರಿಕೆ ರಾಮಣ್ಣ-ಇಂದಿರಾ ದಂಪತಿಯ ಪುತ್ರಿ
* ಬಾಲ್ಯ, ಕಿರಿಯ-ಹಿರಿಯ ಪ್ರಾಥಮಿಕ ಶಿಕ್ಷಣ ಹುಟ್ಟೂರು ಮುಂಡಾಜೆಯಲ್ಲಿ
* ಉಜಿರೆಯ ಕಾಲೇಜಿನಲ್ಲಿ ಬಿಎ ಪದವಿ ಪೂರ್ಣಗೊಳಿಸಿದರು.
* ಪತಿ ಶ್ರೀಯುತ ವಿಶ್ವ ಕುಮಾರ್ ಕಾಯರ್ಗದ್ದೆ.
* ಕಳೆದ ಇಪ್ಪತ್ತೆರಡು ವರ್ಷಗಳಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಭಗವದ್ಗೀತೆ ತರಗತಿಗಳನ್ನು ನಡೆಸುತ್ತಿದ್ದಾರೆ.
* ಕಳೆದ ಹದಿನಾಲ್ಕು ವರ್ಷಗಳಿಂದ ಮನೆಯ ಸಮೀಪದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತಾ ಪಾರಾಯಣ ಮತ್ತು ವಿವರಗಳ ತರಗತಿಗಳನ್ನು ನಡೆಸುತ್ತಿದ್ದಾರೆ.
* ಮಗ ಚಿನ್ಮಯ್ (ವಿದೇಶದಲ್ಲಿ ಉನ್ನತ ವ್ಯಾಸಂಗದ ಜೊತೆ ಉದ್ಯೋಗ), ಮಗಳು ತೇಜಸ್ವಿನಿ (ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ).
* ಸಹಾಯ ಬೇಡಿ ಬಂದವರಿಗೆ ಸದಾ ಶಕ್ತಿಮೀರಿ ಸಹಕರಿಸುವ ಬಂಧು, ಮಿತಭಾಷಿ, ಹಸನ್ಮುಖಿ ಮತ್ತು ಗೃಹಿಣಿ.
